ವೆಂಟಿಲೇಟರ್ ಸಿಗದೆ ಕೊರೊನಾಗೆ ಶಿಕ್ಷಣ ಸಚಿವರ ಪಿಎ ಬಲಿ

0
2089

ಬೆಂಗಳೂರು, ಏ. 19: ಶಿಕ್ಷಣ ಸಚಿವ ಸುರೇಶಕುಮಾರ ಅವರ ಆಪ್ತ ಸಹಾಯಕ ಎಚ್. ಜೆ. ರಮೇಶ ವೆಂಟಿಲೇಟರ್ ಸಿಗದೇ ಸಾವನ್ನಪ್ಪಿದ್ದ ಬಗ್ಗೆ ವರದಿಯಾಗಿದೆ.
ಕಳೆದ ಹದಿನೈದು ದಿನಗಳ ಹಿಂದೆ ಬೆಂಗಳೂರಿನ ಸೆಂಟ್‌ಜಾನ್ ಆಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್‌ನಿಂದಾಗಿ ಭರ್ತಿಯಾಗಿದ್ದ 55 ವರ್ಷದ ರಮೇಶ ಅವರಿಗೆ ಉಸಿರಾಟದ ತೀವ್ರ ಸಮಸ್ಯೆ ಉಂಟಾಗಿದ್ದು, ಅವರಿಗೆ ಅಗತ್ಯವಾಗಿ ಕೃತಕ ಉಸಿರಾಟಕ್ಕೆ ಬೇಕಾದ ವೆಂಟಿಲೆಟರ್ ಸಿಗದೆ ಕೊನೆಗೆ ಸಾವನ್ನಪ್ಪಿದ್ದಾರೆ.
ಕಳೆದ 8 ವರ್ಷಗಳಿಂದ ಸಚಿವ ಸುರೇಶಕುಮಾರ ಬಳಿ ಆಪ್ತ ಸಹಾಯಕರಾಗಿ ರಮೇಶ ಕೆಲಸ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ರಮೇಶ ಕುಮಾರ ಅವರ ಕ್ಷೇತ್ರದ ಜನತೆ ಕೊರನಾದಿಂದ ಬಳಲಿದಾಗ ಅವರನ್ನು ಆಸ್ಪತ್ರೆಗಳಿಗೆ ಕಳುಹಿಸಿ ಗುಣಮುಖರನ್ನಾಗಿ ಮಾಡುವ ಒಳ್ಳೆ ಕೆಲಸವನ್ನು ರಮೇಶ ಅವರು ಮಾಡಿದ್ದರು ಎಂದು ಸಚಿವ ಸುರೇಶಕುಮಾರ ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇಂತಹ ಒಬ್ಬ ಒಳ್ಳಯ ವ್ಯಕ್ತಿಯನ್ನು ನಾವು ಕಳೆದುಕೊಂಡAತಾಗಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸಿದ್ದಾರೆ.
ರಾಜ್ಯ ಶಿಕ್ಷಣ ಸಚಿವರ ಆಪ್ತ ಸಹಾಯಕನಿಗೆ ಈ ಗತಿಯಾದರೇ ಜನ ಸಾಮಾನ್ಯರ ಗತಿಯೇನು ಎಂಬAತಾಗಿದೆ.
ಕೊರೊನಾ 2.0 ತುಂಬಾ ವೇಗವಾಗಿ ಹರಡುತ್ತಿರುವ ಸೋಂಕಾಗಿದ್ದು, ಜನ ಜಾಗೃತೆಯ ಜೊತೆಗೆ ಕೋವಿಡ್ ನಿಯಮಗಳನ್ನು ಅನುಸರಿಸುವ ಮೂಲಕ ತಮ್ಮನ್ನು ತಾವೇ ರಕ್ಷಿಸಿಕೊಳ್ಳುವುದು ಅವಶ್ಯಕವಾಗಿದೆ.
ಈಗಾಗಲೇ ಬೆಂಗಳೂರು ನಗರದಲ್ಲಿ ಈ ಸೋಂಕು ಹೆಮ್ಮಾರಿಯಂತಾಗಿದ್ದು, ರಾಜ್ಯದಲ್ಲಿಯೇ ಅತೀ ಹೆಚ್ಚು ಕೊರೊನಾ ಪ್ರಕರಣದ ಹಾಟ್‌ಸ್ಪಾಟ್ ಬೆಂಗಳೂರು ನಗರವಾಗಿದೆ.

LEAVE A REPLY

Please enter your comment!
Please enter your name here