ಜಿಲ್ಲೆಯಲ್ಲಿ ಶನಿವಾರ 560 ಜನರಲ್ಲಿ ಕೊರನಾ ಸೋಂಕು

0
877

ಕಲಬುರಗಿ, ಏ. 17: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಹೆಣಗುತ್ತಿದ್ದರೂ ಕೂಡಾ ಅದರ ಅರ್ಭಟ ನಿಲ್ಲುತ್ತಿಲ್ಲ ಮತ್ತೆ ಇಂದು ಶನಿವಾರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿAದ ಮೂರು ಜನರು ಸಾವನ್ನಪ್ಪಿದ್ದು, ಇದರಿಂದಾಗಿ ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 378ಕ್ಕೆ ಏರಿದೆ.
ಶನಿವಾರ ಹೊಸದಾಗಿ 560 ಜನರಲ್ಲಿ ಸೋಂಕು ಕಾಣಿಸಿಕೊಂಡು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿದೆ.
ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 211 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದಿನ ಈ ಸಂಖ್ಯೆ ಸೇರಿ 26048 ಜನರು ಬಿಡುಗಡೆಯಾದಂತಾಗಿದೆ.
ನಿನ್ನೆ ಗುರುವಾರ ಜಿಲ್ಲೆಯಲ್ಲಿ 488 ಜನರಿಗೆ ಸೋಂಕು ತಗುಲಿದ್ದು, ಇಂದು ಮತ್ತೇ ಈ ಸಂಖ್ಯೆ ಹೆಚ್ಚಾಗಿದೆ.
ಇಂದು 560 ಸೇರಿದಂತೆ ಈ ವರೆಗೆ 28877 ಪಾಸಿಟೀವ್ ಪ್ರಕರಣಗಳಾಗಿವೆ. ಒಟ್ಟು 3257 ಸಕ್ರೀಯ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here