ಕಲಬುರಗಿ, ಏ. 17: ಕೊರೊನಾ ಸೋಂಕಿನಿoದ ಬಳಲಿ ನಿನ್ನೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಂದಿಗೆ ವ್ಯದ್ಯರು ಸೇರಿ ಸಿಬ್ಬಂದಿಗಳು ರೋಪು ತೋರಿಸಿದ್ದಾರೆ. 70 ರ‍್ಷ ವಯಸ್ಸಿನ ವೃದ್ಧೆ ಕಲಾವತಿ ಗಂಡ ಶಿವಶರಣಪ್ಪ ಎಂಬ ಮಹಿಳೆ ಕೊರೊನಾ ಪಾಸಿಟಿವ್‌ನಿಂದಾಗಿ ನಗರದ ವಾತ್ಸಲ್ಯ ಆಸ್ಪತ್ರೆಗೆ ಏಪ್ರಿಲ್ 16ರಂದು ಮಧ್ಯಾಹ್ನ ದಾಖಲಾಗಿದ್ದರು. ಅವರಿಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದರಿಂದ ಕೃತಕ ಆಮ್ಲಜನಕ ಅಳವಡಿಸುವುದು ಅವಶ್ಯಕವಾಗಿದ್ದು ಕೋವಿಡ್ ಐಸಿಯುಗೆ ದಾಖಲಿಸಲು ಅವರ ಪಾಲಕರು ಕೇಳಿಕೊಂಡಾಗ ಒಪ್ಪಿದ ವೈದ್ಯರು ಮೂರನೇ ಮಹಡಿಯಲ್ಲಿ ಒಬ್ಬ ಕೋವಿಡ್ ರೋಗಿ ನಿಧನ ಹೊಂದಿದ್ದು ಆ ಬೆಡ್‌ನ್ನು ನಿಮಗೆ ಕೊಡುವುದಾಗಿ ಹೇಳಿ ನಂತರ 2-3 ಗಂಟೆಯಾದರೂ ಕೊಡದಿದ್ದಾಗ ಸಿಬ್ಬಂದಿಗಳಿಗೆ ಕೇಳಿದಾಗ ಆ ಬೆಡ್ ಬೇರೆಯೊಬ್ಬರಿಗೆ ಕೊಡಲಾಗಿದೆ ಎಂದು ಹಾರಿಕೆ ಉತ್ತರ ನೀಡಿದ್ದು, ಅಲ್ಲದೇ ಯಾರೋಬ್ಬ ಪೋಲಿಸ್ ಅಧಿಕಾರಿಯಿಂದ ಬೆದರಿಕೆ ಕೂಡ ಹಾಕಿದ ಘಟನೆ ವರದಿಯಾಗಿದೆ.
ಅನಿವರ‍್ಯವಾಗಿ ಬೇರೆಡೆ ನಮ್ಮ ಪೆಸೆಂಟ್‌ನ್ನು ಕರೆದೊಯ್ಯವುದಾಗಿ ಪಾಲಕು ಹೇಳಿದಾಗಲೂ ಕೂಡ ಸಿಬ್ಬಂದಿಗಳು ಅದಕ್ಕೆ ಒಪ್ಪದೇ ಇಲ್ಲಿಂದ ನೀವು ಹೋಗುವ ಹಾಗಿಲ್ಲ, ಬೇರೆ ಅಸ್ಪತ್ರೆಯಿಂದ ರ‍್ತಿ ಮಾಡಿಕೊಳ್ಳುವ ಕುರಿತು ಲೆಟರ್ ತರಬೇಕೆಂದು ರೋಗಿಯ ಪಾಲಕರೊಂದಿಗೆ ಜಗಳವಾಡಿದ ಪ್ರಸಂಗ ಜರುಗಿ, ಕೊನೆಯಲ್ಲಿ ರೋಗಿಯನ್ನು ಉಳಿಸಿಕೊಳ್ಳಲು ನಗರದ ಕೆಬಿನೆ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೊದಲೇ ಕೊರೊನಾದಿಂದ ಬಳಲಿ ಬೆಂಡಾಗಿದ್ದ ಸೋಂಕಿತರಿಗೆ ಚಿಕಿತ್ಸೆ ನೀಡುವುದನ್ನು ಬಿಟ್ಟು ಅವರಿಗೆ ತೊಂದರೆ ಕೊಡುವುದು ಅಲ್ಲದೇ ಅವರಿಗೆ ಧಮಕಿ ಹಾಕುವುದು ಎಷ್ಟು ಸಮಂಜಸ ಎಂದು ಸೋಂಕಿತರ ಪಾಲಕರು ಕಣ್ಣಿರಿಟ್ಟು ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.