ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಕೊರೊನಾ ಪಾಸಿಟೀವ್

0
1380

ಬೆಂಗಳೂರು, ಏ. 16: ಮುಖ್ಯಮಂತ್ರಿ ಬಿ.ಎಸ್. ಯಡಿಯರೂಪ್ಪ ಅವರಿಗೆ ಕೊರೊನಾ ಪಾಸಿಟೀವ್ ಬಂದಿದೆ.
ಕಳೆದ ಒಂದು ವಾರದಿಂದ ಬೆಳಗಾಂವ, ಮಸ್ಕಿ ಹಾಗೂ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳು ಇಂದು ರಾಮಯ್ಯ ಆಸ್ಪತ್ರೆಯ ಕುಟುಂಬ ವೈದ್ಯರು ಕರೊನಾ ಬಂದ ಬಗ್ಗೆ ಧಡೃ ಪಡಿಸಿದಾರೆ.
ಮೊದಲು ಬಿಎಸ್.ವೈ.ಗೆ ಆಂಟಿಜನ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ನಂತರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದ್ದಿದ್ದು, ಚುನಾವಣಾ ಪ್ರಚಾರದಲ್ಲಿ ಸಿಎಂ. ಅವರೊಂದಿಗೆ ಇದ್ದವರಿಗೆ ಈಗ ಢವ ಢವ ಉಂಟಾಗಿದೆ.
ಮೂರು ಕ್ಷೇತ್ರಗಳ ಚುನಾವಣಾ ಕಣದಲ್ಲಿದ್ದ ಬಿಜೆಪಿ ಅಭ್ಯರ್ಥಿಗಳಿಗೂ ಕೊರೊನಾ ಸೋಂಕಿನ ಪರೀಕ್ಷೆ ಈಗ ಅನಿ ವಾರ್ಯವಾಗಿದೆ.
ರಾಮಯ್ಯ ಆಸ್ಪತ್ರೆಯಿಂದ ಮುಖ್ಯಮಂತ್ರಿಗಳು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಕಳೆದ ವರ್ಷದ ಆಗಸ್ಟನಲ್ಲಿ ಬಿಎಸ್‌ವೈ ಅವರಿಗೆ ಕೊರೊನಾ ಸೋಂಕು ತಗುಲಿ ಅವರು ಒಂದು ವಾರ ಕಾಲ ಮಣಿಪಾಲ ಆಸ್ಪತ್ರೆಗೆ ದಾಖಲಾಗಿ, ಗುಣಮುಖರಾಗಿ ಹೊರಬಂದಿದ್ದರು.
ಈಗ ಮತ್ತೆ ಅವರಿಗೆ ಕೊರೊನಾ ಸೋಂಕು ತಗುಲಿದ ಬಗ್ಗೆ ವರದಿ ಬರುತ್ತಿದ್ದಂತೆ ಮೊದಲು ಲಸಿಕೆ ಪಡೆದ ಅವರು ಎರಡನೇ ಲಸಿಕೆಯನ್ನು ಚುನಾವಣಾ ಪ್ರಚಾರ ಪ್ರಯುಕ್ತ ಪಡೆಯಲು ಆಗಲಿಲ್ಲ.

LEAVE A REPLY

Please enter your comment!
Please enter your name here