ಕಲಬುರಗಿ.ಏ.11:ವಿವಿಧ ಕಾರಣದಿಂದ ನಿಷ್ಕ್ರೀಯ ಹಂತದಲ್ಲಿದ್ದ ಕಲಬುರಗಿ ಡಿ.ಸಿ.ಸಿ ಬ್ಯಾಂಕಿಗೆ ರಾಜ್ಯ ರ‍್ಕಾರವು 10 ಕೋಟಿ ರೂ. ಶೇರು ಹಣ ನೀಡಿದ್ದು, ಬ್ಯಾಂಕ್ ಪುನಶ್ಚೇತನಕ್ಕೆ ರಾಜ್ಯ ರ‍್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಹೇಳಿದರು.
ರವಿವಾರ ಕಲಬುರಗಿ ನಗರದ ಗ್ರ‍್ಯಾಂಡ್ ಹೋಟೆಲ್‍ನಲ್ಲಿ ಕರೆಯಲಾದ ಸಚಿವರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.ಸಿ.ಸಿ. ಬ್ಯಾಂಕಿಗೆ ಅಪೆಕ್ಸ್ ಬ್ಯಾಂಕ್ ಕೂಡ 200 ಕೋಟಿ ರೂ. ಸಾಲ ನೀಡಲು ಒಪ್ಪಿಗೆ ಸೂಚಿಸಿದೆ ಎಂದರು.
ಕಲಬುರಗಿ ಡಿ.ಸಿ.ಸಿ ಬ್ಯಾಂಕಿನ ಪ್ರಸ್ತುತ ಆಡಳಿತ ಮಂಡಳಿ ಉತ್ತಮವಾಗಿ ಕರ‍್ಯನರ‍್ವಹಿಸುತ್ತಿದ್ದು ಇದರ ಪರಿಣಾಮ 187 ಕೋಟಿ ರೂ. ಸಾಲ ವಸೂಲಾತಿಯಾಗಿದೆ. ಕಲಬುರಗಿ ಸೇರಿದಂತೆ ರಾಜ್ಯದ 21 ಡಿ.ಸಿ.ಸಿ. ಬ್ಯಾಂಕ್ ಗಳನ್ನು ಪುನಶ್ಚೇತನಕ್ಕೆ ರ‍್ಕಾರದ ಬದ್ಧವಿದೆ ಎಂದರು.
ರಾಜ್ಯ ರ‍್ಕಾರವೇ ಡಿ.ಸಿ.ಸಿ ಬ್ಯಾಂಕಿಗೆ 300 ಕೋಟಿ ರೂ. ಹೆಚ್ಚುವರಿ ಸಾಲ ನೀಡುವ ಮೂಲಕ ಬ್ಯಾಂಕಿಗೆ ರ‍್ಥಿಕ ಬಲ ನೀಡಬೇಕು ಎಂಬ ಪತ್ರರ‍್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು ಬ್ಯಾಂಕ್ ಬೇಡಿಕೆ ಅನುಗುಣವಾಗಿ ಹಂತ ಹಂತವಾಗಿ ರಾಜ್ಯ ರ‍್ಕಾರದಿಂದ ಹಣ ನೀಡಲಾಗುವುದು ಎಂದರು.
30 ಲಕ್ಷ ರೈತರಿಗೆ ಸಾಲ ನೀಡುವ ಗುರಿ: ಪ್ರಸಕ್ತ ಮುಂಗಾರು ಹಂಗಾಮಿಗೆ ರಾಜ್ಯದ 30 ಲಕ್ಷ ರೈತರಿಗೆ ಸುಮಾರು 20 ಸಾವಿರ ಕೋಟಿ ರೂ. ಡಿ.ಸಿ.ಸಿ. ಬ್ಯಾಂಕುಗಳಿಂದ ಸಾಲ ನೀಡುವ ಗುರಿ ಹೊಂದಿದೆ ಎಂದು ಸಹಕಾರ ಸಚಿವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ, ಕರ‍್ಮಿಕ ಸಚಿವ ಶಿವರಾಂ ಹೆಬ್ಬಾರ್, ಮೂಲಸೌರ‍್ಯ, ಹಜ್ ಮತ್ತು ವಕ್ಫ್ ಸಚಿವ ಆನಂದ್ ಸಿಂಗ್ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಅರ್. ನಿರಾಣಿ ಇದ್ದರು.