ಕೊರೊನಾ ವೈರಸ್ ಹೆಚ್ಚಳ, ಬೆಡ್ ವ್ಯವಸ್ಥೆ ಕೊರತೆಯಿಲ್ಲ

0
1013

ಕಲಬುರಗಿ: ಏ. 06: ಜಿಲ್ಲೆಯಲ್ಲಿ ಕೊರೊನಾ ವೈರಸ್‌ಗೆ ತುತ್ತಾಗುವ ಜನರಿಗೆ ಜಿಮ್ಸ್ನಲ್ಲಿ ಬೆಡ್ ವ್ಯವಸ್ಥೆ ಇದೆ ಕೊರತೆ ಇಲ್ಲ, ಹಾಗೊಂದು ವೇಳೆ ಕೊರೊನಾ ಹೆಚ್ಚಾಗಿ ಕೊರತೆ ಕಂಡು ಬಂದರೆ ಖಾಸಗಿ ಆಸ್ಪತ್ರೆಗಳ ಲಿಸ್ಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಹೇಳಿದರು.
ಮಂಗಳವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ತುಂಬಾ ವೇಗವಾಗಿದೆ. ಕಳೆದ ಬಾರಿ ಈ ದಿನಗಳಲ್ಲಿ 240 ಪ್ರಕರಣಗಳಿದ್ದವು, ಈ ಬಾರಿ ಅದಕ್ಕಿಂತ ಹೆಚ್ಚಾಗುವ ಸಾಧ್ಯತೆಗಳು ನಿಚ್ಚಳವಾಗಿವೆ ಎಂದರು.
ರ್ಯಾಲಿ, ಪ್ರತಿಭಟನೆಗೆ ಮತ್ತು ಸಭೆ, ಸಮಾರಂಭಗಳಿಗೆ ನಿರ್ಬಂಧವಿದೆ, ನಿಷೇಧಿಸಿಲ್ಲ. ಆದರೂ, ಜನರು ತುಂಬಾ ಎಚ್ಚರಿಕೆ ವಹಿಸಿಕೊಳ್ಳಬೇಕು. ಮಾಸ್ಕ್ ಮತ್ತು ಸ್ಯಾನಿಟೈಸ್ ಹಾಗೂ ಪರಿಸರ ಉತ್ತಮವಾಗಿ ಇಟ್ಟುಕೊಳ್ಳುವ ಹೊಣೆ ಅವರೇ ಹೊತ್ತುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳ ಹೊಣೆ ಜಿಲ್ಲಾಡಳಿತ ನಿಭಾಯಿಸಲಿದೆ ಎಂದರು.
ಪರ್ಯಾಯ ವ್ಯವಸ್ಥೆ: ಸಾರಿಗೆ ಇಲಾಖೆಯ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ನಗರದಲ್ಲಿ ತೊಂದರೆ ಆಗದಂತೆ ಎಚ್ಚರಿಕೆ ಕ್ರಮವಾಗಿ ಖಾಸಗಿ ವಾಹನ ಮಾಲಿಕರ ಜತೆಯಲ್ಲಿ ಸಂಪರ್ಕ ಸಾಧಿಸಲು ಸಂಬAಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿರಂತರವಾಗಿ ನಿಗರಾಣಿ ಮಾಡಿ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.
ಜಿಮ್ ಬಂದ್ :
ಈಗಾಗಲೇ ಜಿಲ್ಲೆಯಲ್ಲಿನ ಜಿಮ್‌ಗಳು, ಈಜುಕೊಳ ಮತ್ತು ಇತರೆ ಸಾರ್ವಜನಿಕರು ಹೆಚ್ಚು ಸೇರುವಂತಹ ಸ್ಥಳಗಳಲ್ಲಿನ ಚಟುವಟಿಕೆ ನಿಲ್ಲಿಸಲಾಗಿದೆ. ಶಾಲೆ, ಕಾಲೇಜುಗಳ ಮೇಲೂ ಕಣ್ಣಿಡಲಾಗಿದೆ. ಈಗಾಗಲೇ ಪ್ರಾಥಮಿಕ ಶಾಲೆಗಳ ತರಗತಿ ನಿಲ್ಲಿಸಲಾಗಿದೆ. ಉಳಿದಂತೆ ಜನರು ಕೂಡ ಹೆಚ್ಚಿನ ಜವಾಬ್ದಾರಿಯಿಂದ ಜಿಲ್ಲಾಡಳಿತದ ಜೊತೆಯಲ್ಲಿ ಸಹಕರಿಸಬೇಕು ಎಂದರು.
ಸಿಇಓ ಹಾಗೂ ಇತರೆ ಅಧಿಕಾರಿಗಳು ಇದ್ದರು.

LEAVE A REPLY

Please enter your comment!
Please enter your name here