ಶಾಮ ನಾಟೀಕರ್ ಅವರಿಗೆ ಮಾತೃ ವಿಯೋಗ

0
1164

ಕಲಬುರಗಿ, ಏ. 01: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಜಿಡಿಎ ಸದಸ್ಯ ಶಾಮರಾವ ನಾಟೀಕರ್ ಅವರ ತಾಯಿ ಶ್ರೀಮತಿ ಬಸಮ್ಮ ಚಂದ್ರಶೇಖರ ನಾಟೀಕಾರ ಅವರು ನಿನ್ನೆ ರಾತ್ರಿ ನಿಧನರಾದರೆಂದು ತಿಳಿಸಲು ವಿಷಾಧವೇನಿಸುತ್ತದೆ.
ಕಳೆದ ಹಲವಾರು ದಿನಗಳಿಂದ ಅಸ್ತಮಾದಿಂದ ಬಳಲುತ್ತಿದ್ದ ಬಸಮ್ಮ ಅವರನ್ನು ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ 31ರ ರಾತ್ರಿ 8 ಗಂಟೆಗೆ ಅವರು ಕೊನೆಯುಸಿರೆಳೆದರು.
72 ವರ್ಷ ವಯಸ್ಸಿನ ಬಸ್ಸಮ್ಮ ನಾಟೀಕಾರ ಅವರು ಶಾಮ ನಾಟೀಕಾರ, ಉಮೇಶ ನಾಟೀಕಾರ, ಶ್ರೀಕಾಂತ ನಾಟೀಕಾರ, ಲಕ್ಷಿö್ಮÃಕಾಂತ ನಾಟೀಕಾರ ಸೇರಿದಂತೆ ಪುತ್ರಿಯರಾದ ಅರುಣಾ ಲೆಂಗಟಿಕರ್, ಇಂದುಬಾಯಿ ಕಾಂಬಳೆ, ಮಾಯಾ ಮೇತ್ರೆ ಗಂಡ ಚಂದ್ರಶೇಖರ ಮತ್ತು ಮೊಮ್ಮಗ ಕಾರ್ತಿಕ ನಾಟೀಕಾರ ಮತ್ತು ಮೊಮ್ಮಕ್ಕಳು, ಅಲ್ಲದೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ದಿವಂಗತ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಎಂ.ಬಿ.ನಗರ ರಸ್ತೆಯ ಸಂಗತ್ರಾಸವಾಡಿಯ ಮರಗಮ್ಮ ದೇವಸ್ಥಾನ ಹತ್ತಿರದ ಮನೆಯಲ್ಲಿ ಸಂಜೆ 4 ಗಂಟೆಯವರೆಗೆ ಇಡಲಾಗಿದೆ.
ಮೃತರ ಅಂತ್ಯಕ್ರಿಯೆಯು ಇಂದು ಏಪ್ರಿಲ್ 1ರಂದು ಗುರುವಾರ ಸಂಜೆ 4 ಗಂಟೆಗೆ ಕಲಬುರಗಿ ಬಸವೇಶ್ವರ ಕಾಲೋನಿ ಸಂಗತ್ರಾಸವಾಡಿಯ ಶಿವ ಮಂದಿರ ಸಮೀಪದ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಅವರು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಶ್ರೀಮತಿ ಬಸ್ಸಮ್ಮ ಚಂದ್ರಶೇಖರ ನಿಧನಕ್ಕೆ ಮನೀಷ ಪತ್ರಿಕೆಯ ಸಂಪಾದಕರಾದ ರಾಜು ದೇಶಮುಖ ಅವರು ತೀವ್ರ ಸಂತಾಪ ವ್ಯಕ್ತ ಪಡಿಸಿ, ಶಾಮ ನಾಟೀಕಾರ ಅವರಿಗೆ ಹಾಗೂ ಅವರ ಕುಟುಂಬ ವರ್ಗದವರಿಗೆ ದುಃಖ ಸಹಿಸಿಕೊಳ್ಳುವು ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

LEAVE A REPLY

Please enter your comment!
Please enter your name here