ಯುವಕನೋರ್ವನ ಬರ್ಬರ ಕೊಲೆ ಉದ್ರಿಕ್ತರಿಂದ ಆಸ್ಪತ್ರೆ ಗಾಜು, ವಾಹನಗಳ ಜಖಂ

0
1705

ಕಲಬುರಗಿ, ಮಾ. ೨೯: ಹಳೆ ವೈಶಮ್ಯದಿಂದ ಓರ್ವ ಯುವಕನನ್ನು ಹಾಡು ಹಗಲೆ ಜೀಮ್ಸ್ ಆಸ್ಪತ್ರೆಯ ಎದುರುಗಡೆ ಕೊಲೆ ಮಾಡಲಾದ ಘಟನೆಯ ಹಿನ್ನೆಲೆಯಲ್ಲಿ ಉದ್ರಿಕ್ತ ಯುವಕರ ಗುಂಪೊAದು ಜೀಮ್ಸ್ ಆಸ್ಪತ್ರೆಯ ಕ್ಯಾಜುಲಿಟಿಯ ಗ್ಲಾಸ್‌ಗಳನ್ನು ಹಾಗೂ ಸುಂದರ ನಗರ ಬಡಾವಣೆಯಲ್ಲಿ ಹೊರಗಡೆ ನಿಲ್ಲಿಸಲಾಗಿದ್ದ ಹಾನಗಳನ್ನು ಪುಡಿ ಪುಡಿ ಮಾಡಿ ಜಖಂಗೊಳಿಸಿದ್ದಾರೆ.

ಜೀಮ್ಸ್ ಆಸ್ಪತ್ರೆಗೆ ರಕ್ತಸಾವ್ರದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಹೊತ್ತುಕೊಂಡು ಸುಮಾರು ೩೦ ರಿಂದ ೪೦ ಯುವಕರು ನುಗ್ಗಿ, ಅಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ, ಕೂಡಲೇ ಚಿಕಿತ್ಸೆ ನೀಡಬೇಕು, ಮತ್ತು ಆತನನ್ನು ಬದುಕಿಸಬೇಕೆಂದು ಕೂಗುತ್ತ ಹತ್ತೆ ನಿಮಿಷದಲ್ಲಿ ಆಸ್ಪತ್ರೆಯನ್ನು ರಣರಂಗವನ್ನಾಗಿ ಮಾಡಿದ್ದು, ಅಲ್ಲದೆ ಹಲ್ಲೆಗೊಳಗಾದ ಸಿಬ್ಬಂದಿ ಏನು ದೋಚಲಾಗದೆ ಆಸ್ಪತ್ರೆಯಿಂದ ಗಾಬರಿಯಾಗಿ ತಪ್ಪಿಸಿಕೊಂಡ ಬಗ್ಗೆಯೂ ವರದಿಯಾಗಿದೆ.
ಸುಮಾರು ೧೦೦ಕ್ಕೂ ಹೆಚ್ಚು ಯುವಕರು ರಸ್ತೆಯ ಬದಿಯಲ್ಲಿ ಸುಂದರ ನಗರ ಬಡಾವಣೆಗೆ ನುಗ್ಗಿ, ಮಾಜಿ ಮೇಯರ್‌ಗೆ ಸಂಬAಧಪಟ್ಟ ಒಂದು ಇನೊವಾ ಕಾರು ಸೇರಿದಂತೆ ಒಟ್ಟು ಮೂರು ಕಾರುಗಳು ಹಾಗೂ ೫೦ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಆಯುಧಗಳಿಂದ ಹೊಡೆದು ಜಖಂಗೊಳಿಸಿದ್ದಾರೆನ್ನಲಾಗಿದೆ.
ಸುAದರನಗರ ಬಡಾವಣೆಯಲ್ಲಿ ಪೋಲಿಸ ಅಧಿಕಾರಿಗಳು, ತಮ್ಮ ಸಿಬ್ಬಂದಿ ಯೊಂದಿಗೆ ಬಿಡುಬಟ್ಟಿದ್ದು, ಪರಿಸ್ಥಿತಿ ಹತೋಟಿಗೆ ತರಲಾಗಿದೆ.
ಸುಮಾರು ರಾತ್ರಿ ೨ ಗಂಟೆಯವರೆಗೂ ಸ್ಥಳೀಯವಾಗಿ ದಿಗಿಲುತುಂಬಿದ ವಾತಾವರಣ ನಿರ್ಮಾಣವಾಗಿತ್ತು.
ಈಗಾಗಲೇ ಈ ಘಟನೆಗೆ ಸಂಬAಧಿಸಿದAತೆ ಹಲವಾರು ಯುವಕರನ್ನು ಪೋಲಿಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಕೊಲೆಗೆ ಸಂಬAಧಪಟ್ಟAತೆ ತನಿಖೆಯನ್ನು ಎಸಿಬಿಗೆ ನೀಡಲಾಗಿದೆ ಎಂದು ಪೋಲಿಸ್ ನಗರ ಆಯುಕ್ತರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here