ರಾಜ್ಯದಲ್ಲಿ ಶನಿವಾರ ಹೊಸ 2886 ಕೊರೊನಾ ಪ್ರಕರಣ ದಾಖಲು ಕಲಬುರಗಿ, ಬೆಂಗಳೂರು ಸೇರಿದಂತೆ ಒಟ್ಟು 8 ಜನ ಬಲಿ

0
1059

ಬೆಂಗಳೂರು, ಮಾ. 27: ಶನಿವಾರ ರಾಜ್ಯದಲ್ಲಿ ಹೊಸದಾಗಿ 2886 ಜನರಲ್ಲಿ ಕೊರೊನಾ ಪಾಸೀಟಿವ್ ಪ್ರಕರಣಗಳು ದಾಖಲಾಗಿದು, ಒಟ್ಟು ಇಂದು 8 ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಶನಿವಾರ ಸಂಜೆ ಆರೋಗ್ಯ ಇಲಾಖೆ ಹೊರಡಿಸಿದ ಬುಲೆಟಿನ್‌ನಲ್ಲಿ ಈ ಅಂಕಿ ಸಂಖ್ಯೆ ಪ್ರಕಟವಾಗಿದ್ದು, ಇಂದು ಆಸ್ಪತ್ರೆಯಿಂದ 1179 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ.
ಈವರೆಗೆ ರಾಜ್ಯದಲ್ಲಿ 983930 ಜನರಿಗೆ ಸೋಂಕು ತಗುಲಿದ್ದು, ಈವರೆಗೆ ಒಟ್ಟು 950167 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು 21252 ಜನರು ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 8 ಜನರ ಸಾವು ಸೇರಿದಂತೆ ಈವರೆಗೆ 12492 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಅಲ್ಲದೇ ವಿವಿಧ ಕಾರಣಗಳಿಂದಾಗಿ ರಾಜ್ಯದಲ್ಲಿ ಇಂದು 19 ಜನರು ಬಲಿಯಾಗಿದ್ದಾರೆ ಎಂದು ಇಲಾಖೆ ಬಿಡುಗಡೆ ಮಾಡಿದ ಆರೋಗ್ಯ ಬುಲೆಟಿನನಲ್ಲಿ ತಿಳಿಸಿದೆ.
ಜಿಲ್ಲಾವಾರು ಕೊರೊನಾ ಪ್ರಕರಣಗಳು ಇಂದು ಹೊಸದಾಗಿ ದಾಖಲಾದ ಪಟ್ಟಿ ಇಂತಿದೆ.
ಬಾಗಲಕೋಟೆಯಲ್ಲಿ 11, ಬಳ್ಳಾರಿ 21, ಬೆಳಗಾವಿ 16, ಬೆಂಗಳೂರು ಗ್ರಾಮಾಂತರ 58, ಬೆಂಗಳೂರು ನಗರ 1820, ಬೀದರ 82, ಚಾಮರಾಜನಗರ 7, ಚಿಕ್ಕಬಳ್ಳಾಪುರ 10, ಚಿಕ್ಕಮಂಗಳೂರು 40, ಚಿತ್ರದುರ್ಗ 9, ದಕ್ಷಿಣ ಕನ್ನಡ 39, ದಾವಣಗೇರೆ 4, ಧಾರವಾಡ 41, ಗದಗ 13, ಹಾಸನ 43, ಹಾವೇರಿ 2, ಕಲಬುರಗಿ 147, ಕೊಡಗು 7, ಕೋಲಾರ 33, ಕೊಪ್ಪಳ 6, ಮಂಡ್ಯ 16, ಮೈಸೂರು 131, ರಾಯಚೂರು 10, ರಾಂನಗರ 5, ಶಿವಮೊಗ್ಗ 15, ತುಮಕೂರು 80, ಉಡುಪಿ 156, ಉತ್ತರ ಕನ್ನಡ 14, ವಿಜಯಪುರ 41, ಯಾದಗಿರ 9.
ರಾಜ್ಯದ ಕಲಬುರಗಿ 02, ಬೆಂಗಳೂರು ನಗರ 02, ತುಮಕೂರು, ಹಾಸನ, ಬೀದರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕೊರಾಗೆ ತಲಾ ಒಬ್ಬ ವ್ಯಕ್ತಿ ಬಲಿಯಾಗಿದ್ದು, ಇಂದು ಒಟ್ಟು 8 ಜನರು ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here