(ನಮ್ಮ ಪ್ರತಿನಿಧಿಯಿಂದ)
ಕಲಬುರಗಿ, ಮಾ. 21: ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಔದ್ಯೋಗಿಕ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಪ್ರಶಾಂತ ಮಾನಕರ್ ಅವರು ಅಧ್ಯಕ್ಷರಾಗಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಾಲಿ ಅಧ್ಯಕ್ಷ ಅಮರನಾಥ ಪಾಟೀಲ್ ಅವರು 646 ಮತಗಳನ್ನು ಪಡೆಯುವ ಮೂಲಕ ಅತೀ ಹೀನಾಯವಾಗಿ ಸೋಲುನುಭವಿಸಿದ್ದಾರೆ.
ಪ್ರಶಾಂತ ಮಾನಕರ್ ಅವರು 1524 ಮತಗಳು ಬಂದಿದ್ದು, ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಅಮರನಾಥ ಪಾಟೀಲ್ ಅವರನ್ನು 848 ಮತಗಳ ಅಂತರದಿAದ ಸೋಲಿಸಿ 2021-2026ನೇ ಸಾಲಿಗಾಗಿ ಹೆಚ್.ಕೆ.ಸಿ.ಸಿ.ಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಮತ ಏಣಿಕೆಯು ನಗರದ ಸಾರ್ವಜನಿಕ ಉದ್ಯಾನವನದ ಹತ್ತಿರದ ರೋಟರಿ ಕ್ಲಬ್ ಶಾಲೆಯಲ್ಲಿ ನಡೆಯಿತು. ರಾತ್ರಿ 2 ಗಂಟೆಗೆ ಅಂತಿಮ ಫಲಿತಾಂಶ ಪ್ರಕಟವಾಯಿತು. ಚುನಾವಣಾಧಿಕಾರಿಯಾಗಿ ನಿವೃತ್ತ ಪೋಲಿಸ ಅಧಿಕಾರಿ ಬಸವರಾಜ ಇಂಗಿನ ಹಾಗೂ ರಿಟನಿಂಗ್ ಅಧಿಕಾರಿಯಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಿತೀಂದ್ರ ಸೂಗುರ ಅವರು ಅಚ್ಚುಕಟ್ಟಾಗಿ ಚುನಾವಣೆ ನಡೆಸಿಕೊಟ್ಟರು.
ಚುನಾವಣೆಗಾಗಿ ಹೆಚ್ಚಿನ ಪೋಲಿಸ್ ಬಂದೋಬಸ್ತ ಮಾಡಲಾಗಿತ್ತು. ಪಿಐಗಳಾದ ಪಂಡೀತ ಸಗರ (ಅಶೋಕ ನಗರ) ಹಾಗೂ ಕಪೀಲ್‌ದೇವ (ಬ್ರಹ್ಮಪೂರ) ಅವರುಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಶೇಷ ಪೋಲಿಸ್ ಬಂದೋಬಸ್ತ ಮಾಡಿದರು.
ಇತಿಹಾಸ ಸೃಷ್ಟಿಸಿದ ಮಾನಕರ್ :
ಕಳೆದ ಹಲವಾರು ವರ್ಷಗಳಿಂದ ನಡೆದ ಈ ಸಂಸ್ಥೆಯ ಚುನಾವಣೆಯಲ್ಲಿ ಈ ಬಾರಿ ಪ್ರಶಾಂತ ಮಾನಕರ್ ಅವರು ಎದುರಾಳಿ ಪೆನಾಲ್‌ನ ಒಬ್ಬ ಅಭ್ಯರ್ಥಿಯೂ ಆಯ್ಕೆಯಾಗದೆ, ಇಡೀ ಮಾನಕರ್ ಪೆನಾಲ್ ಆಯ್ಕೆಯಾಗಿ, ಇತಿಹಾಸವೇ ಸೃಷ್ಟಿಸಿದ್ದಾರೆ.
ಈಗಾಗಲೇ ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಮಾನಕರ್ ಪೆನಾಲ್‌ನಿಂದ ಶರಣು ಪಪ್ಪಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ರಾಜಶೇಖರ ಪಾಟೀಲ್ ಬೆಡಸೂರ ಅವರು 1351 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀತಪದ ಪ್ರತಿಸ್ಪರ್ಧಿ ಪಾಟೀಲ್ ಪೆನಾಲ್‌ನ ರವಿಕಾಂತ ಸರಸಂಬಿ ಅವರನ್ನು 276 ಮತಗಳಿಂದ ಸೋಲಿಸಿದರು.
ಖಜಾಂಚಿಯಾಗಿ ಸಿ.ಎ. ಗುರುದೇವ ಎ. ದೇಸಾಯಿನ ಅವರು ಆಯ್ಕೆಯಾಗಿದ್ದಾರೆ.
ಇನ್ನು ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಾನಕರ್ ಪೆನಾಲ್‌ನ ಅಮೀತ ಆರ್. ಮಾರಮರ್ ಅವರು 1464 ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಭೀಮಾಶಂಕರ ಅವರನ್ನು 503 ಮತಗಳ ಅಂತರದಿAದ ಸೋಲಿಸಿದರು.
ಇನ್ನು ಎಂ.ಸಿ. ಮೇಂಬರ್ ಕಾರ್ಪೋರೆಟರ್ ಸೆಕ್ಟರ್‌ನಿಂದ ಡಾ. ಕೈಲಾಸ ಪಾಟೀಲ್ ಅವರು 1888 ಮತಗಳನ್ನು ಪಡದು ಆಯ್ಕೆಯಾದರು.
ಮೋಪುಸೆಲ್ ಸೆಕ್ಟರ್‌ದಿಂದ ಕರುಣೇಶ ಎಸ್. ಘಂಟಿ, ರಾಮಚಂದ್ರ ಬಿ. ಕೋಸಗಿ ಮತ್ತು ಸೈಯದ ನಿಜಾಮುದ್ದೀನ್ ಚಿಸ್ತಿ ಅವರುಗಳು ಆಯ್ಕಯಾಗಿದ್ದಾರೆ.
ಕಾರ್ಯಕಾರಿ ಮಂಡಳಿ ಸದಸ್ಯ ಸ್ಥಾನದ ಎಲ್ಲ 15 ಸ್ಥಾನಗಳನ್ನು ಮಾನಕರ್ ಅವರ ಪೆನಾಲ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಕರ‍್ಯಕಾರಣಿ ಸಮಿತಿ ಸದಸ್ಯರುಗಳಾಗಿ ಮಹಾದೇವ ವಿ. ಖೇಣಿ (1884), ಜಗದೀಶ ಆರ್. ಕಡಗಂಚಿ ( 1825), ಕೇದಾರ ಎಸ್. ರಘೋಜಿ (1817), ಮಹಾದೇವ ಎಸ್. ತಾವರಗೇರಾ (1795), ಗಿರೀಶ ಜಗನ್ನಾಥ ಅಣಕಲ್ (1778), ಸಂಗಮೇಶ ರುದ್ರಶೆಟ್ಟಿ ಕಲ್ಯಾಣಿ (1697), ನಾಗರಾಜ ಎಸ್. ನಿಗ್ಗುಡಗಿ (1695), ರಾಮಕೃಷ್ಣ ವಿ. ಬೋರಾಳಕರ್ (1671), ಸಂದೀಪ ವಿ. ಮಿಶ್ರಾ (1659), ಮನೀಷ ವಿ. ಜಾಜು (1620), ಎ. ವೆಂಕಟ ಚಿಂತಾಮಣಿ ರಾವ (1600), ಮೃತ್ಯುಂಜಯ ಸಿ. ವಸ್ತçದ (1566), ಶರಣಬಸಪ್ಪಾ ಅಶೋಕ ಜೀವಣಗಿ (1553), ಶ್ರೀನಿವಾಸ ನೋಗಜಾ (1441), ಶರಣಬಸಪ್ಪ ಬಿ. ಬಿರಾಳ (1423) ಅವರುಗಳು ಆಯ್ಕೆಯಾಗಿದ್ದಾರೆ. ಎಲ್ಲರೂ ಪ್ರಶಾಂತ ಮಾನಕರ್ ಪೆನಾಲ್‌ನ ಅಭ್ಯರ್ಥಿಗಳಾಗಿದ್ದಾರೆ.