ಹಿರಿಯ ಬಿಜೆಪಿ ಧುರೀಣ ವಾಲ್ಮೀಕ ನಾಯಕ ನಿಧನ

0
1106

ಕಲಬುರಗಿ, ಮಾ. 19: ಭಾರತೀಯ ಜನತಾ ಪಕ್ಷದ ಹಿರಿಯ ಧುರೀಣ ವಾಲ್ಮೀಕ ನಾಯಕ ಅವರು ಶುಕ್ರವಾರ ಹೃದಯಾಪಘಾತದಿಂದ ನಿಧನ ಹೊಂದಿದ್ದಾರೆ.
ಇಲ್ಲಿನ ಜಯದೇವ ಆಸ್ಪತ್ರೆಯಲ್ಲಿ ತೀವ್ರ ಎದೆ ನೋವಿನಿಂದಾಗಿ ಬಳಲಿ ದಾಖಲಾಗಿದ್ದು, ಇಂದು ಬೆಳಿಗ್ಗೆ 9 ಗಂಟೆಗೆ ಕೊನೆಯುಸಿರೆಳೆದರು.
ನಾಯಕ ಅವರು ಕಳೆದ ಬಾರಿ ಚಿತ್ತಾಪೂರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಈ ಮೊದಲು ಅವರಿಗೆ ಹೃದಯ ಶಸ್ತç ಚಿಕಿತ್ಸೆಯಾಗಿದ್ದು, ಇಂದು ಬೆಳಿಗ್ಗೆ ವಾಡಿಯಲ್ಲಿ ಬೆಳಿಗ್ಗೆ 7 ಗಂಟೆಗೆ ವಾಕಿಂಗ್ ಮಾಡುವಾಗ ಇದಕ್ಕಿದಂತೆ ಎದೆನೋವು ಕಾಣಿಸಿಕೊಂಡಾಗ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಯತು.
ದಿವಂಗತರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು, ಇಬ್ಬರು ಗಂಡು ಮತ್ತು ನಾಲ್ಕು ಜನ ಹೆಣ್ಣು ಮಕ್ಕಳ, ಪತ್ನಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ನಾಳೆ ಶನಿವಾರ ಮಧ್ಯಾಹ್ನ 1 ಗಂಟೆಗೆ ವಾಡಿಯ ಅವರ ಸ್ವಂತ ಹೊಲದಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ವಾಲ್ಮೀಕ ನಾಯಕ ನಿಧನಕ್ಕೆ ಮಾಜಿ ನಗರಸಭೆ ಸದಸ್ಯ ಕಿಶನ ಜಾಧವ ಅವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here