ಕಲಬುರಗಿಯಲ್ಲಿ ಏರುತ್ತಿರುವ ಕೊರೊನಾ ಸಂಖ್ಯೆ ಬುಧುವಾರ 61 ಜನರಲ್ಲಿ ಕೊರೊನಾ ಸೋಂಕು ಪತ್ತೆ

0
1315

ಕಲಬುರಗಿ, ಮಾ.17: ಬುಧುವಾರ ಪ್ರಕಟವಾದ ಆರೋಗ್ಯ ಬುಲೆಟಿನ್‌ನಲ್ಲಿ ಜಿಲ್ಲೆಯಲ್ಲಿ ಹೊಸದಾಗಿ 61 ಪಾಸಿಟಿವ್ ಪ್ರಕರಣ ವರದಿಯಾಗಿವೆ.
ಸೋಮವಾರ 38 ಇದ್ದ ಪ್ರಕರಣಗಳ ಸಂಖ್ಯೆ ಮಂಗಳವಾರ 48 ಮತ್ತು ಬುಧುವಾರ 61ಕ್ಕೆ ಏರಿದ್ದು, ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಕಳೆದ ವರ್ಷ ಮಾರ್ಚನಲ್ಲಿಯೇ ಕೊರೊನಾ ಕಲಬುರಗಿಗೆ ಕಾಲಿಟ್ಟು ಮೊದಲ ಬಲಿ ಪಡೆದಿತ್ತು.
ಈಗ ಮತ್ತೆ ಕೊರೊನಾ ಕಲಬುರಗಿಯಲ್ಲಿ ಹೆಚ್ಚಾಗುವ ಸಾಧ್ಯತೆಯಿದ್ದು, ಇಂದಿನ ಪ್ರಕರಣಗಳು ಸೇರಿದಂತೆ ಒಟ್ಟು ಕಲಬುರಗಿಯಲ್ಲಿ 22531 ಪಾಸಿಟಿವ್ ಕೇಸ್ ಗ ಲಾದಂತಾಗಿದೆ.
25 ಜನ ಆಸ್ಪತ್ರೆ ಯಿಂದ ಇಂದು ಬಿಡುಗಡೆಯಾಗಿದ್ದಾರೆ. ಈ ವರೆಗೆ 21844 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 355 ಜನ ಸಕ್ರಿಯ ರೋ ಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 332 ಜನರು ಸಾವಿಗೀ ಡಾದಂತಾಗಿದೆ .

LEAVE A REPLY

Please enter your comment!
Please enter your name here