ಕಲಬುರಗಿ, ಮಾ. 11: ನಗರದ ವಿಜಯನಗರ ಬಾಡವಣೆಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲೂ ಭಕ್ತರ ದಂಡೆ ಹರಿದುಬರುತ್ತಿದ್ದು, ಇಲ್ಲಿನ ವಿಶೇಷವೆಂದರೆ ಇಡೀ ದೇವಾಲಯವೇ ಲಿಂಗದಲ್ಲಿ ನಿರ್ಮಿಸಲಾಗಿದ್ದು, ಸುಮಾರು 21 ಅಡಿ ಲಿಂಗದಲ್ಲಿ ದೇವಾಲಯವಿದ್ದು, ಅಲ್ಲಿಯೇ ಶಿವನಗೆ ಪೂಜೆ ಸಲ್ಲಿಸಲಾಗುತ್ತಿದೆ.
ಹಿಂದುಗಳ ಆರಾಧ್ಯದೇವ, ಹರ ಹರ ಮಹಾದೇವನಿಗೆ ಭಕ್ತರು ದರ್ಶನ ಪಡೆದು ಕೃತಾರ್ಥರಾಗುತ್ತಿದ್ದು, ದರ್ಶನಕ್ಕೆ ಆಗಮಿಸುವ ಪ್ರತಿಯೊಬ್ಬರು ಕೂಡಾ ಸರಕಾರದ ಕೋವಿಡ ನಿಯಮಾವಳಿ ಪ್ರಕಾರ ಮುಖಕ್ಕೆ ಮಾಸ್ಕ ಧರಿಸುವುದಲ್ಲದೇ ಸಾಮಾಜಿಕ ಅಂತರ ಕಾಪಾಡಿಕೊಂಡು ಸರತಿಯಲ್ಲಿ ಬಂದು ದರ್ಶನ ಪಡೆಯುತ್ತಿದ್ದಾರೆ.
ಇಲ್ಲಿ ಭಕ್ತಾದಿಗಳಿಗಾಗಿ ಈ ಬಾರಿಯೂ ಕೂಡಾ ದೇವಸ್ಥಾನದಿಂದ ಪ್ರಸಾದ ವ್ಯವಸ್ಥೆಯನ್ನು ಮಾಡದೇ ದರ್ಶನ ಭಾಗ್ಯ ಮಾತ್ರ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಸಿದ್ದಲಿಂಗಯ್ಯ ಶ್ರೀಗಳು ತಿಳಿಸಿದ್ದಾರೆ.
ಕಳೆದ 15 ವರ್ಷದ ಹಿಂದೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಮಿಟಿ ಮಾಡಿ ಈ ದೇವಸ್ಥಾನ ಕಟ್ಟಿಸಲಾಗಿದ್ದು, ಇಲ್ಲಿ ಭಕ್ತರ ಮಹಾಪೂರವೇ ವರ್ಷ ವರ್ಷ ಹರಿದು ಬರುತ್ತದೆ ಎಂದು ಅವರು ವಿವರಿಸಿದರು.