‘ಮಹಾ ಶಿವರಾತ್ರಿ ಮನ ಶುದ್ಧೀಕರಣದ ಆಚರಣೆ’ ಮಕ್ತಂಪುರದ ಶಿವಾನಂದ ಮಹಾಸ್ವಾಮಿಗಳ ಅಭಿಮತ

0
828

ಕಲಬುರಗಿ, ಮಾ. 11: ನಮ್ಮ ಮನದ ಶುದ್ಧಿಕರಣದ ಅವಲೋಕನಕ್ಕೆ ಕಾರಣವಾದ, ಭಕ್ತಿಯಲ್ಲಿ ಮನದ ಪರಿಶುದ್ಧತೆ ಅಭಿವ್ಯಕ್ತಗೊಳ್ಳಬೇಕೆಂಬ, ಭಕ್ತಿಯು ಸರಳ ಹಾಗೂ ಸಹಜತೆಯಿಂದ ಕೂಡಿರಬೇಕು, ಜೊತೆಗೆ ಪರಮಾತ್ಮನ ಬೆಳಕು ಕಾಣುವುದೇ ನಮ್ಮ ಭಕ್ತಿಯ ಉದ್ದೇಶವಾಗಿರಬೇಕು. ಇಂತಹ ಅಂಶಗಳು ನಮ್ಮಲ್ಲಿ ಮೂಡಿದಾಗ ಆಗ ಭಕ್ತಿಯು ಸಾರ್ಥಕತೆಯನ್ನು ಪಡೆಯುತ್ತದೆಯೆಂಬ ಮೇರು ಸಂದೇಶವು ಶಿವರಾತ್ರಿ ಹೊಂದಿದೆಯೆAದು ಮಕ್ತಂಪುರ ಗುರುಬಸವ ಮಠದ ಪೂಜ್ಯ ಶಿವಾನಂದ ಮಹಾಸ್ವಾಮೀಜಿಗಳು ಅಭಿಮತ ವ್ಯಕ್ತಪಡಿಸಿದರು.
ನಗರದ ಮಕ್ತಂಪುರದ ಗುರುಬಸವ ಮಠದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಮಹಾ ಶಿವರಾತ್ರಿ ಸಂದೇಶ’ ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡುತ್ತಿದ್ದರು.
ಎಲ್ಲರಲ್ಲಿಯೂ ಭಕ್ತಿಯನ್ನು ಹೆಚ್ಚಿಸುವ, ಅಪ್ರತಿಮ, ಅಗೋಚರ, ಪರಿಪೂರ್ಣತೆಯ ಶಕ್ತಿಯಾದ ಶಿವನನ್ನು ಆರಾಧಿಸುವ ಹಬ್ಬವೇ ಮಹಾ ಶಿವರಾತ್ರಿಯಾಗಿದೆ. ಜಗತ್ತಿನ ಸಕಲ ಜೀವರಾಶಿಗಳಲ್ಲಿ ಚೈತನ್ಯಾತ್ಮಕ ಶಕ್ತಿಯೇ ಪರಮಾತ್ಮನಾಗಿದ್ದಾನೆ. ಎಲ್ಲಾ ಚಟುವಟಿಕೆಗಳ ಒಡೆಯನಾದ ಶಿವನ ಆರಾಧನೆಯು ಭಾರತೀಯ ಸಂಸ್ಕೃತಿಯಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಮನುಷ್ಯ ಸಂಸಾರದ ಜಂಜಾಟದಲ್ಲಿ, ದಿನನಿತ್ಯದ ಒತ್ತಡದ ಬದುಕಿನಲ್ಲಿ ಶಾಂತಿಯನ್ನು ಕಳೆದುಕೊಂಡು, ಅಶಾಂತಿಯನ್ನು ಎದುರಿಸುತ್ತಿದ್ದಾನೆ. ಪ್ರಸ್ತುತ ದಿನಗಳಲ್ಲಿ ಮಾನಸಿಕ ನೆಮ್ಮದಿಗಾಗಿ ಭಕ್ತಿ, ಧ್ಯಾನ ಹೆಚ್ಚಾಗಿ ಅವಶ್ಯಕತೆಯಾಗಿದೆಯೆಂದರು.
ಚಿಂತಕ ನರಸಪ್ಪ ಬಿರಾದಾರ ದೇಗಾಂವ ಮಾತನಾಡುತ್ತಾ, ಶರಣರು ಸಕಲ ಜೀವರಾಶಿಗಳಲ್ಲಿ ಶಿವನಿದ್ದಾನೆಂದು ಹೇಳಿ, ಆಚರಿಸಿ ತೋರಿಸಿದ್ದಾರೆ. ಪ್ರತಿಯೊಬ್ಬರು ಪರಸ್ಪರ ಪ್ರೀತಿ, ಪ್ರೇಮ, ಸೌಹಾರ್ದತೆಯಿಂದ ಬಾಳಬೇಕು. ನೈಜ ಭಕ್ತಿ, ಪರಸ್ಪರ ನಂಬಿಕೆ, ನಿಸ್ವಾರ್ಥ ಸೇವೆ, ವಿಶ್ವಾಸವಿದ್ದರೆ ದೇವರ ಸಾಕ್ಷಾತ್ಕಾರ ಸಾಧ್ಯವಿದೆಯೆಂದು ತಿಳಿಸಿದ್ದಾರೆ. ಸಮರ್ಪಣ ಮನೋಭಾವನದಿಂದ, ಶರಣಾಗತಿಯಿಂದ ಭಕ್ತಿ ಮಾಡಬೇಕೆಂಬ ಸಂದೇಶ ಸಾರ್ವಕಾಲಿಕವಾಗಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ದೇವರಿದ್ದಾನೆಂದು ಕಂಡಾಗ ಸಮಾಜದಲ್ಲಿ ಅಶಾಂತಿ ದೂರವಾಗುತ್ತದೆಯೆಂದು ನುಡಿದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡುತ್ತಾ, ಸತ್ಯ, ಶುದ್ಧವಾದ, ಪ್ರಾಮಾಣಿಕ, ನಡೆ-ನುಡಿಗಳಿಂದ ಪ್ರತಿಕ್ಷಣವು ಕಾಯಕ ಮಾಡಿದ್ದೆ ಆದರೆ ಶಿವನ ಸಾಕ್ಷಾತ್ಕಾರ ಜೊತೆಗೆ ದಿನಾಲೂ ಶಿವರಾತ್ರಿ ಆಚರಿಸಿದಂತಾಗುತ್ತದೆಯೆAದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಬಸವರಾಜ ಎಸ್.ಪುರಾಣೆ, ದೇವೇಂದ್ರಪ್ಪ ಗಣಮುಖಿ, ರಾಜಕುಮಾರ ಬಟಗೇರಿ, ಅಣ್ಣಾರಾಯ ಎಚ್.ಮಂಗಾಣೆ, ಎಸ್.ಎಸ್.ಪಾಟೀಲ ಬಡದಾಳ, ನಾನಾಗೌಡ ಪಾಟೀಲ, ಅಣ್ಣಾರಾಯ ಕುಣಕೇರಿ, ಮಲ್ಲಿಕಾರ್ಜುನ ಇಂಗಳಗಿ, ವೀರಯ್ಯಸ್ವಾಮಿ ಶಿವಯೋಗಿಮಠ, ಮಲ್ಲಿಕಾರ್ಜುನ, ಎಂ.ಎನ್.ಕುAಟೋಜಿ, ಪ್ರಕಾಶ ರಾಜಾಪೂರ, ಚನ್ನಮಲ್ಲಪ್ಪ ಮುಲಮಡಗಿ, ಚಂದ್ರಶೇಖರ ಮ್ಯಾಳಗಿ, ಸಂದೀಪ ಹಳ್ಳಿ, ಸೇರಿದಂತೆ ಬಡಾವಣೆಯ ಭಕ್ತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here