ಗಂಡನ ಕಿರುಕಳಕ್ಕೆ ಹೆಂಡತಿ, ಮಗ ನೇಣಿಗೆ ಶರಣು

0
1342

ಕಲಬುರಗಿ,ಮಾ.11-ಗಂಡನ ಕಿರುಕುಳ ತಾಳದೆ ಹೆಂಡತಿ ಮತ್ತು ಮಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಸ್ವಸ್ಥಿಕ ನಗರದಲ್ಲಿ ನಡೆದಿದೆ.
ಸುಚಿತ್ರಾ ಜಗದೀಶ್ ಕಾಂಬಳೆ ಮತ್ತು ಅವರ ಮಗ ವಿನಿತ್ ಜಗದೀಶ್ ಕಾಂಬಳೆ ಆತ್ಮಹತ್ಯೆಗೆ ಶರಣಾದವರು.
ಸುಚಿತ್ರಾ ಹಾಗೂ ಜಗದೀಶ್ ಅವರು ಮದುವೆಯಾಗಿ ಹತ್ತು ವರ್ಷಗಳಾಗಿದ್ದು, ಒಂಬತ್ತು ವರ್ಷದ ಮಗನಿದ್ದ. ಗಂಡ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ತಾಯಿ ಮತ್ತು ಮಗ ಸ್ವಸ್ಥಿಕ ನಗರದಲ್ಲಿರುವ ಅಪಾರ್ಟಮೆಂಟ್ ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಜಗದೀಶ್ ಕಾಂಬಳೆ ಅವರು ಸೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ)ದ ಕಾಳಗಿ ಶಾಖೆಯಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬAಧ ಸುಚಿತ್ರಾ ಪಾಲಕರು ಮಹಾತ್ಮಾ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಈ ದೂರಿನ ಅನ್ವಯ ಪಿಐ ಚಂದ್ರಶೇಖರ್ ತಿಗಡಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಜಗದೀಶ್ ಕಾಂಬಳೆ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here