ನಗರದಲ್ಲಿ ಟೂವ್ಹಿಲರ್ ಕಳ್ಳತನ ಮೂವ್ವರನ್ನು ಬಂಧಿಸಿದ ಸ್ಟೇಷನ್ ಬಜಾರ ಪೋಲಿಸರು

0
952

ಕಲಬುರಗಿ,ಮಾ.6: ನಗರದಲ್ಲಿ ದ್ವಿಚಕ್ರವಾಹನಗಳ ಕಳ್ಳತನದಲ್ಲಿ ತೊಡಗಿದ ಪ್ರಕರಣಗಳಿಗೆ ಸಂಬAಧಿಸಿದAತೆ ಸ್ಟೇಷನ್ ಬಜಾರ್ ಠಾಣೆಯ ಪೋಲಿಸರು ವಿದ್ಯಾರ್ಥಿ ಸೇರಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ವಿಶ್ವನಾಥ್ ಹಂಗರಗಿ(19), ಮಲ್ಲಿಕಾರ್ಜುನ್ ಮಲಬುದ್ದಿ (23) ಹಾಗೂ ಭಗವಂತ್ ಪೂಜಾರಿ (22) ಎಂದು ಗುರುತಿಸಲಾಗಿದೆ. ಬಂಧಿತರಿAದ ಒಟ್ಟು ಹತ್ತು ಲಕ್ಷ ರೂ.ಗಳ ಮೌಲ್ಯದ ಸುಮಾರು 28 ದ್ವಿಚಕ್ರವಾಹನಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳೆಲ್ಲರೂ ನಗರದ ನಿವಾಸಿಗಳು. ಇಬ್ಬರು ಮೊಬೈಲ್ ದುರಸ್ತಿ ಕೆಲಸ ಮಾಡುತ್ತಿದ್ದು, ಮತ್ತೋರ್ವ ವಿದ್ಯಾರ್ಥಿಯಾಗಿದ್ದಾನೆ.
ಕಳೆದ ಕೆಲ ದಿನಗಳಿಂದ ಮೂವರು ಸೇರಿ ನಗರದ ಖೂಬಾ ಪ್ಲಾಟ್, ಸಿಬಿಐ ಕಾಲೋನಿ, ಗೋದುತಾಯಿ ನಗರ, ಸಾಯಿ ಮಂದಿರ, ಸಂತೋಷ್ ಕಾಲೋನಿ, ಬ್ರಹ್ಮಪೂರ್, ಚೌಡೇಶ್ವರ್ ಕಾಲೋನಿ ಮತ್ತು ಸೂಪರ್ ಮಾರ್ಕೆಟ್‌ನಲ್ಲಿ ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದು, ಪೋಲಿಸರಿಗೆ ಸವಾಲಾಗಿತ್ತು.

LEAVE A REPLY

Please enter your comment!
Please enter your name here