ಕಲಬುರಗಿ, ಫೆ. 27-ಈ ಶತಮಾನದ ಮಾಹಾಮಾರಿ ಸಾಂಕ್ರಾಮಿಕ ಸೋಂಕು ಕೋವಿಡ್ 19 ಅಂದರೆ ಜನ ಭಯಭೀತರಾಗುತ್ತಿದ್ದು, ಇದರ ಬಗ್ಗೆ ಜನರಲ್ಲಿ ಜಾಗ್ರತಿ ಇರಲಿ, ಭಯಬೇಡ, ಈ ಸಾಂಕ್ರಾಮಿಕ ಸೋಂಕು ಈಗಾಗಲೇ ಜನರನ್ನು ಹಿಪ್ಪಿಹಿಂಡಿ ಮಾಡಿಬಿಟ್ಟಿದೆ. ಈ ಎಲ್ಲ ವದಂತಿಗಳು ನಂಬದೆ ಜಾಗ್ರತರಾಗಿ, ಮಾಸ್ಕ, ಸಾಮಾಜಿಕ ಅಂತರ, ಅಲ್ಲದೇ ಆಗಾಗ ಕೈಗಳನಷ್ಟೆ ಅಲ್ಲ ಶುಚಿತ್ವವನ್ನು ಕಾಪಾಡಿದರೆ ಕೋವಿಡ್ ಅಲ್ಲ ಯಾವುದೇ ಸಾಂಕ್ರಾಮಿಕ ರೋಗವು ಸಮೀಪ ಸುಳಿಯುವುದಿಲ್ಲ.
ಕೋವಿಡ್ ಎರಡನೇ ಅಲೇ ಎಂಬಿತ್ಯಾದಿ ಸುದ್ದಿಗಳಿಂದ ಜನ ಭಯಭೀತಗೊಂಡಿದ್ದು, ಮತ್ತೆ ಲಾಕ್‌ಡೌನ್ ಮಾಡುತ್ತಾರೆಯೇ ಎಂಬ ಪ್ರಶ್ನೆ ಜನರಲ್ಲಿ ಉದ್ಭವಿಸುತ್ತಿದೆ.
ನೆರೆಯ ಮಹಾರಾಷ್ಟç ಮತ್ತು ಕೇರಳದಲ್ಲಿ ಕೊರೊನಾ ಎಂಬ ಮಹಾಮಾರಿ ಮತ್ತೆ ಉಲ್ಪಣಗೊಳ್ಳುತ್ತಿದ್ದು, ಇದರಿಂದ ಗಡಿ ಭಾಗದಲ್ಲಿರುವ ಜನರು ಭಯಭೀತಗೊಂಡಿದ್ದು, ಕೊರೊನಾ ನೆಗೆಟಿವ್ ವರದಿಯಿದ್ದರೆ ಮಾತ್ರ ಗಡಿಯೊಳಗೆ ಪ್ರವೇಶ ಎಂಬ ಸರಕಾರದ ಕಟ್ಟೆಚ್ಚರಕ್ಕೆ ಜನರು ತತ್ತರಿಸಿ ಹೋಗಿದ್ದು, ಖಾಸಗಿ ಆಸ್ಪತ್ರೆಗಳು ಸರಕಾರ ಕೋವಿಡ್ 19ರ ರಕ್ತದ ಮಾದರಿ ತಪಾಸಣೆಗಾಗಿ 2500 ರಿಂದ 3000 ರೂ ಸುಲಿಗೆ ಮಾಡುತ್ತಿದ್ದು, ಕೇವಲ ಒಂದು ಗಂಟೆಯಲ್ಲಿಯೇ ವರದಿ ತಯಾರುತ್ತಿದೆ.
ಈಗಾಗಲೇ ಸರಕಾರ ಖಾಸಗಿ ಆಸ್ಪತ್ರೆಗಳಿಗೆ 450 ರೂ. ವರೆಗೆ ಮಾತ್ರ ಕೊವಿಡ್ ಪರೀಕ್ಷೆ ಮಾಡಲು ದರ ನಿಗದಿ ಮಾಡಿದ್ದು, ಈ ಬಗ್ಗೆ ಜಿಲ್ಲಾಡಳಿತ ನಗರದ ಎಲ್ಲ ಖಾಸಗಿ (ಯಾವ ಯಾವ ಆಸ್ಪತ್ರೆಗಳು ಪರೀಕ್ಷೆ ಮಾಡುತ್ತವೆ ಅವುಗಳನ್ನು ಮಾತ್ರ) ಪರಿಶೀಲಿಸಬೇಕು, ಅಲ್ಲದೇ ಜನರಲ್ಲಿ ಕೋವಿಡ್ ಬಗ್ಗೆ ಈಗಾಗಲೇ ಎಲ್ಲಡೆ ಮತ್ತೆ ಲಾಕ್‌ಡೌನ್ ಮಾಡುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎಂಬ ಗಾಳಿ ಸುದ್ದಿಗೆ ಸೊಪ್ಪು ಹಾಕದಂತೆ ಜಿಲ್ಲಾಡಳಿ ಪ್ರಕಟಣೆ ಹೊರಡಿಸಿ ಜನರಲ್ಲಿ ಮನವಿ ಮಾಡಿಕೊಳ್ಳವುದು ಅನಿವಾರ್ಯವಾಗಿದೆ.