ಹೆಚ್.ಕೆ.ಇ. ಗದ್ದುಗೆ ಯಾರಿಗೆ?

0
1158
Contesting members of hke election, Kalaburagi 2021

(ರಾಜು ಎಂ. ದೇಶಮುಖ)
ಕಲಬುರಗಿ, ಫೆ. 26: ಕಲ್ಯಾಣ ಕರ್ನಾಟಕ ಭಾಗದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ದಿ. ಮಹಾದೇವಪ್ಪ ರಾಂಪುರೆ ಅವರು ಕಟ್ಟಿಬೆಳೆಸಿದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಗೆ ಇದೇ 27ರಂದು ಚುನಾವಣೆ ನಡೆಯಲಿದೆ.
ಈ ಬಾರಿಯ ಚುನಾವಣೆಯಲ್ಲಿ ಮೂರು ಜನ ಘಟಾನುಘಟಿ ಅಭ್ಯರ್ಥಿಗಳು ಕಣದಲ್ಲಿದ್ದು, ಶತಾಯಗತಾಯ ಅಧ್ಯಕ್ಷ ಗಾದಿ ಪಡೆಯಲು ತೀವ್ರ ಪೈಪೋಟಿಯಲ್ಲಿ ನಿರತರಾಗಿದ್ದಾರೆ.
ಒಟ್ಟು 1591 ಮತದಾರರು ಹೊಂದಿದ ಈ ಸಂಸ್ಥೆ ಈಗಾಗಲೇ ಕೋವಿಡ ಸಂದರ್ಭದಲ್ಲಿ ಹಲವಾರು ಮತದಾರರು ಸಾವನ್ನಪ್ಪಿದ್ದು, ಅಲ್ಲದೇ ಸುಮಾರು 3000 ಸಾವಿರಕ್ಕೂ ಹೆಚ್ಚು ಮತದಾರರು ಜಿಲ್ಲೆಯಿಂದ ಹೊರಗಿದ್ದಾರೆ.
ಹಾಲಿ ಅಧ್ಯಕ್ಷರಾಗಿರುವ ಡಾ. ಭೀಮಾಶಂಕರ ಬಿಲಗುಂದಿ ಅವರು ಇನ್ನೊಂದು ಬಾರಿ ಅವಕಾಶ ಮಾಡಿಕೊಡಿ, ಸಂಸ್ಥೆ ಅಭಿವೃದ್ಧಿಗೆ ಮತ ನೀಡಿ ಅಲ್ಲದೇ ಸಾಫ ನಿಯತ, ಸಹೀ ವಿಕಾಸ ಎಂಬ ಸ್ಲೋಗನದಡಿ ಸ್ಪರ್ಧೆಯಲ್ಲಿ ಧುಮಕಿದರೆ, ಕಳೆದ ಚುನಾವಣೆಗೆ ಸ್ಪರ್ಧಿಸದ ಮಾಜಿ ಅಧ್ಯಕ್ಷ ವಿಧಾನ ಪರಿಷತ್ ಸದಸ್ಯ ಬಿಜೆಪಿ ಹಿರಿಯ ಧುರೀಣರಾದ ಶಶೀಲ್ ಜಿ. ನಮೋಶಿ ಅವರು ಈ ಬಾರಿ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ದೃಷ್ಟಿಯಿಂದ ಚುನಾವಣೆಯಲ್ಲಿ ಧುಮಕಿದ್ದು, “ನಮ್ಮ ಸರಕಾರ ರಾಜ್ಯ ಮತ್ತು ಕೇಂದ್ರದಲ್ಲಿದೆ” ಈ ನಿಟ್ಟಿನಲ್ಲಿ ನಮಗೆ ಮತ ನೀಡಿದರೆ ಸಂಸ್ಥೆಗೆ ಹಲವಾರು ಕಾರ್ಯಕ್ರಮಗಳಡಿ ಹೆಚ್ಚಿನ ಅನುದಾನದೊಂದಿಗೆ ಸಂಸ್ಥೆ ಉತ್ತಂಗಕ್ಕೇರಿಸುವ ಕನಸು ಹೊಂದಿ ನಮೋಶಿ ಅವರು ತಮಗಾಗಿ ಯುವ ಮತದಾರರ ಪಡೆಯ ಜೊತೆಗೆ ಹಿರಿಯ ಸದಸ್ಯರುಗಳ ದಂಡೆ ಬೆಂಬಲಕ್ಕೆ ನಿಂತ ಹಿನ್ನೆಲೆಯಲ್ಲಿ ಗೆಲುವಿಗೆ ಮತದಾರರ ಬೆಂಬಲದ ಆಶಯದೊಂದಿಗೆ ಕಣದಲಿದ್ದಾರೆ.
ಹಳೆ ಹುಲಿಯೆಂದು ಹೆಸರುವಾಸಿಯಾದ ನಾಲ್ಕು ಬಾರಿ ಈ ಸಂಸ್ಥೆಯ ಅಧ್ಯಕ್ಷರಾಗಿದ್ದ ಖ್ಯಾತ ಉದ್ಯಮಿ ಬಸವರಾಜ ಭೀಮಳ್ಳಿ ಅವರು ಕೂಡಾ ಸಂಸ್ಥೆಗೆ ತಮ್ಮ ಅವಧಿಯಲ್ಲಿನ ಸಾಧನೆಗಳು ಹಾಗೂ ಸಂಸ್ಥೆಗೆ ಸಲ್ಲಿಸಿದ ಸೇವೆ ಮುಂದಿಟ್ಟುಕೊAಡು ನನಗೆ ಮತ ನೀಡಿ ಕಳೆದ ಬಾರಿ ಅಲ್ಪ ಮತಗಳಿಂದ ಪರಾಭವಗೊಂಡ ನನಗೆ ಅವಕಾಶ ನೀಡಿ ಎಂಬುವುದರೊAದಿಗೆ ಚುನಾವಣೆಯಲ್ಲಿ ಧುಮಕಿದ್ದಾರೆ.
ಹಾಲಿ ಅಧ್ಯಕ್ಷರಾದ ಭೀಮಾಶಂಕರ ಬಿಲಗುಂದಿ ಅವರ ಪೆನಾಲ್‌ನಿಂದ ಉಪಾಧ್ಯಕ್ಷ ಸ್ಥಾನಕ್ಕಾಗಿ ಖ್ಯಾತ ವೈದ್ಯ ಡಾ. ಶಿವಾನಂದ ದೇವರಮನಿ ಸ್ಪರ್ಧಿಸಿದ್ದು, ಇನ್ನು ಕಾರ್ಯಕಾರಿ ಸದಸ್ಯ ಸ್ಥಾನಕ್ಕಾಗಿ ಆನಂದ ಎಸ್. ದಂಡೋತಿ, ಡಾ. ಅನೀಲ್ ಎಸ್. ಮರಗೋಳ, ಬಸವರಾಜ ಜೆ. ಖಂಡೇರಾವ, ಗಂಗಾಧರ ಡಿ. ಯೇಲಿ ರಾಯಚೂರ, ಡಾ. ಜಗನ್ನಾಥ ಬಿ. ಬಿಜಾಪೂರ, ಡಾ. ಕೈಲಾಸ ಬಿ. ಪಾಟೀಲ್, ಡಾ. ನಿತೀನ ಬಿ. ಜವಳಿ, ಸಂಗಮೇಶ್ವರ ಗಂಗು ಬೀದರ, ಸತೀಶ್ಚಂದ್ರ ಹಡಗಿಲಮಠ, ಡಾ. ಶರಣಬಸಪ್ಪಾ ಕಾಮರೆಡ್ಡಿ, ಸೋಮನಾಥ ಸಿ. ನಿಗ್ಗುಡಗಿ, ಸುರೇಶ ಡಿ. ಬುಲಬುಲೆ ಮತ್ತು ವಿಜಯಕುಮಾರ ದೇಶಮುಖ ಅವರುಗಳು ಕಣದಲ್ಲಿದ್ದಾರೆ.
ಮಾಜಿ ಹೆಚ್.ಕೆ.ಇ. ಅಧ್ಯಕ್ಷರಾಗಿದ್ದ ಬಸವರಾಜ ಭೀಮಳ್ಳಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಅವರ ಪೆನಾಲ್‌ನಿಂದ ಉಪಾಧ್ಯಕ್ಷ ಸ್ಥಾನಕ್ಕೆ ಡಾ. ಶರಣಬಪಸ್ಪ ಹರವಾಳ ಅವರು ಸ್ಪರ್ಧಿಸಿದರೆ ಇನ್ನು ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗಾಗಿ ಅನೀಲ ಕಳಸ್ಕರ್, ಅರುಣಕುಮಾರ ಎಂ. ಪಾಟೀಲ್, ಚಂದ್ರಶೇಖರಯ್ಯ ಎಸ್. ಹಿರೇಮಠ, ದೊಡ್ಡಪ್ಪ ಎಸ್. ನಿಷ್ಠಿ, ಮಹಾದೇವಪ್ಪ ವಾಯ್. ರಾಂಪುರೆ, ಎನ್. ಗಿರೀಜಾಶಂಕರ, ನಾಗಣ್ಣ ಎಸ್. ಘಂಟಿ, ಡಾ. ನಾಗೇಂದ್ರ ಎಸ್. ಮಂಠಾಳೆ, ಡಾ. ರಜನೀಶ ಎಸ್. ವಾಲಿ, ಸಾಯಿನಾಥ ಎನ್.ಡಿ. ಪಾಟೀಲ್, ಸುರೇಶ ಗುರಪ್ಪಾ ನಂದ್ಯಾಳ, ಉದಯಕುಮಾರ ಎಸ್. ಚಿಂಚೋಳಿ, ವಿನಯ ಎಸ್. ಪಾಟೀಲ ಅವರುಗಳು ಕಣದಲ್ಲಿದ್ದಾರೆ.
ವಿಧಾನ ಪರಿಷತ್ ಸದಸ್ಯರೂ ಹಾಗೂ ಬಿಜೆಪಿ ಮುಖಂಡರಾದ ಶಶೀಲ್ ಜಿ. ನಮೋಶಿ ಅವರು ಈ ಬಾರಿಯೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಆರ್. ಎಸ್. ಹೊಸಗೌಡ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಹಾಗೂ ಕಾರ್ಯಕಾರಿಣಿ ಮಂಡಳಿ ಸದಸ್ಯ ಸ್ಥಾನಗಳಿಗಾಗಿ ಬೀದರ ಡಾ. ಅಲ್ಲಂಪ್ರಭು ಪಾಟೀಲ, ಡಾ. ಅನೀಲಕುಮಾರ ಬಿ. ಪಟ್ಟಣ, ಜಿ.ಡಿ. ಅಣಕಲ್, ಡಾ. ಕೋರವಾರ ವಿಲಾಸ ಬಾಬು, ಮಂಜುನಾಥ ಜೆಬಿ ಹುಲಿ, ಡಾ. ಸಂಪತಕುಮಾರ ಡಿ. ಲೋಯಾ, ಶೈಲೆಸ್ ಎಸ್. ಸೀರಿ, ಶಾಂತೇಶ ಎ. ಪಾಟೀಲ, ಶಶಿಕಾಂತ ಸೊರಡೆ, ಶಿವಾನಂದ ಚುಕ್ಕಿ ರಾಯಚೂರ, ಶಿವರಾಜ ನಿಗ್ಗುಡಗಿ, ವೈಭವ ವಿ. ರೆಡ್ಡಿ, ವಿಶ್ವನಾಥರೆಡ್ಡಿ ಇಟಗಿ ಅವರುಗಳು ಕಣದಲ್ಲಿದ್ದಾರೆ.
ಚುನಾವಣೆಗೆ ಇನ್ನು ಕೆಲವೆ ಗಂಟೆಗಳು ಉಳಿದಿದ್ದು, ಎಲ್ಲ ಅಭ್ಯರ್ಥಿಗಳು ಹಗಲು ರಾತ್ರಿ ಅನ್ನದೇ ಮತದಾರ ಪ್ರಭುಗಳ ಮನೆಗಳಿಗೆ, ಕಛೇರಿಗಳಿಗೆ ಅಲ್ಲದೇ ಅವರಿದ್ದಲ್ಲಿಗೆ ಹೋಗಿ ತಮ್ಮ ತಮ್ಮ ಸಾಧನೆಯನ್ನು ಒರೆಗೆ ಹಚ್ಚಿ ಮತ ಬೇಟೆಯಲ್ಲಿ ತೊಡಗಿದ್ದಾರೆ.
ಮತದಾರರು ಮಾತ್ರ ತಮ್ಮ ಗುಟ್ಟನ್ನು ಬಿಡದೇ ಮೌನವಾಗಿಯೇ ಎಲ್ಲರೊಂದಿಗೆ ನಿಮಗೆ ಮತ ಎಂದು ಹೇಳುವ ಮೂಲಕ ತೀವ್ರ ಕುತೂಹಲ ಮೂಡಿಸಿದ್ದಾರೆ.
ಒಟ್ಟಿನಲ್ಲಿ ನಾಳೆ ರವಿವಾರ ಸಂಜೆ ಫಲಿತಾಂಶ ಹೊರಬಿಳಲಿದ್ದು, ವಿಜಯಲಕ್ಷಿö್ಮÃ ಯಾರ ಕೊರಳ ಅಲಂಕರಿಸಲಿದ್ದಾಳೆ ಎಂಬುದು ಎಲ್ಲರ ಕುತೂಹಲವಾಗಿದೆ.

LEAVE A REPLY

Please enter your comment!
Please enter your name here