ಕಲಬುರಗಿ, ಫೆ. 15: ಬರುವ ತಾಲೂಕ, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜನತಾ ದಳದ ಅಭ್ಯರ್ಥಿಗಳ ಗೆಲುವಿಗಾಗಿ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದ ಜೆಡಿಎಸ್ ಪ್ರಾಬಲ್ಯ ಹೊಂದಲು ಶಕ್ತಿ ಮೀರಿ ಶ್ರಮಿಸಲು ಈಗಿನಿಂದಲೇ ತಯಾರಿ ನಡೆಸಲಾಗುತ್ತಿದೆ ಎಂದು ನೂತನವಾಗಿ ಜೆಡಿಎಸ್ ಸೇರಿದ ಜಿ.ಪಂ. ಸದಸ್ಯ ಸಂಜೀವನ ಯಾಕಾಪೂರ ಅವರು ಹೇಳಿದ್ದಾರೆ.
ಮೂಲ ಬಿಜೆಪಿಗಿಯರಿಗೆ ಪಕ್ಷದಲ್ಲಿ ಮೂಲೆ ಗುಂಪು ಮಾಡಲಾಗುತ್ತಿದೆ, ಸಂಪೂರ್ಣ ವ್ಯಾಪಾರೀಕರಣವಾಗಿ ಪಕ್ಷದ ದಲ್ಲಿ ವಾತಾವರಣ ನಿರ್ಮಾಣವಾಗಿದೆ, ಹೀಗಿದ್ದಾಗ ನಮ್ಮಂತಹ ಮೂಲ ಬಿಜೆಪಿ ಗರು ಎಲ್ಲಿಗೆ ಹೋಗಬೇಕು, ಹೊರಗಿನಿಂದ ಬಂದವರಿಗೆ ಮನೆ ಹಾಕಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಈ ಹಿನ್ನೆಲೆಯಲ್ಲಿ ತಾವು ಪಕ್ಷ ತೋರೆದು ಜಾತ್ಯಾತೀತ ತಳಹದಿಯ ಮೇಲಿರುವ ಜೆಡಿಎಸ್ ಸೇರ್ಪಡೆಯಾಗಿದ್ದಾಗಿ ತಿಳಿಸಿದರು.
ಈಗಾಗಲೇ ತಮ್ಮ ಬೆಂಬಲಿಗರು ಸಹ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ ಯಾಗಿದ್ದು, ಕಾರ್ಯಕರ್ತರು ಸಹ ತಮ್ಮೊಂದಿಗಿದ್ದಾರೆ ಎಂದು ಹೇಳಿದರು.