ಕಲಬುರಗಿ:ಫೆ.12: ಶುಕ್ರವಾರ ಪ್ರಕಟವಾದ ಆರೋಗ್ಯ ಇಲಾಖೆಯ ಬುಲೆಟಿನ್ ನಲ್ಲಿ 12 ಜನರಿಗೆ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಇಂದು ಪತ್ತೆಯಾದ 12 ಸೇರಿದಂತೆ ಒಟ್ಟು ಕಲಬುರಗಿಯಲ್ಲಿ 21781 ಪಾಸಿಟಿವ್ ಕೇಸ್‌ಗಳು ದಾಖಲಾದಂತಾಗಿದೆ.
ಶುಕ್ರವಾರ ಎಂಟು ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ವರೆಗೆ 21286 ಜನ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.
167 ಜನರು ಸಕ್ರಿಯ ರೋಗಿಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 328 ಜನರು ಸಾವಿಗೀಡಾದಂತಾಗಿದೆ. ಶುಕ್ರವಾರ ಕೊರೊನಾದಿಂದ ಯಾರು ಸಾವಿಗೀಡಾಗಿಲ್ಲ.