ಪಾರ್ಕಿಂಗ್ ಜಾಗದಲ್ಲಿ ಅಂಗಡಿಗಳ ನಿರ್ಮಾಣ ಕಣ್ಣು ಮುಚ್ಚಿ ಕುಳಿತ ಮಹಾನಗರಪಾಲಿಕೆ ಅಧಿಕಾರಿಗಳು?

0
1071

ಕಲಬುರಗಿ, ಫೆ. 11: ನಗರದಲ್ಲಿ ಮುಖ್ಯರಸ್ತೆ ಹಿಡಿದು ಹಲವಾರು ಕಡೆಗಳಲ್ಲಿ ದೊಡ್ಡ ದೊಡ್ಡ ಕಮರ್ಷಿಯಲ್ ಕಟ್ಟಡಗಳು ತಲೆ ಎತ್ತಿದ್ದು, ಮಹಾನಗರಪಾಲಿಕೆಯಿಂದ ಕಟ್ಟಡ ಕಟ್ಟುವ ಮುಂಚೆ ಅರ್ಜಿಯಲ್ಲಿ ಪಾರ್ಕಿಂಗ್ ತೋರಿಸಿದ್ದು, ನಂತರದ ದಿನಗಳಲ್ಲಿ ಪಾರ್ಕಿಂಗ್ ನಲ್ಲಿ ಅಂಗಡಿಗಳನ್ನು ನಿರ್ಮಾಣ ಮಾಡಿದ್ದು ಈಗಾಗಲೇ ಮಹಾನಗರಪಾಲಿಕೆಯಿಂದ ನೋಟಿಸ್ ಜಾರಿ ಮಾಡಲಾಗಿದೆ.
ಆದರೆ ಕಳೆದ ಮೂರು ವರ್ಷಗಳ ಹಿಂದೆ ಜಾರಿ ಮಾಡಿದ ನೋಟಿಸ್‌ಗೆ ಹಲವು ಕಾಂಪ್ಲೆಕ್ಸ್ ಮಾಲಿಕರುಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು, ಇನ್ನು ಕೆಲವು ಅಂಗಡಿಗಳ ಮಾಲಿಕರು ಇದಕ್ಕೆ ಕ್ಯಾರೆ ಅನ್ನದೇ ತಮ್ಮ ತಮ್ಮ ಪಾಡಿಗೆ ತಾವು ವ್ಯವಹಾರ ನಡೆಸಿಕೊಂಡು ಬರುತ್ತಿದ್ದಾರೆ.
ಕಟ್ಟಡ ಕಟ್ಟುವ ಮುಂಚೆ ಮಹಾನಗರಪಾಲಿಕೆಯಿಂದ ಪರವಾನಿಗೆ ಪಡೆಯಬೇಕು, ಪರವಾನಿಗೆ ಪಡೆಯಬೇಕಾದರೆ ಅದರ ನಿಯಮಗಳನ್ವಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಪಾರ್ಕಿಂಗ್ ವ್ಯವಸ್ಥೆ ಅಲ್ಲದೇ ಮೂತ್ರ ವಿಸರ್ಜನೆಗೆ ಪ್ರತ್ಯೇಕವಾಗಿ ಒಂದು ಮೂತ್ರಾಲಯ ಇರುವ ಬಗ್ಗೆ ಪರಿಶೀಲಿಸಿ ಪರವಾನಿಗೆ ನೀಡುವದಾಗಿದೆ.
ಮೊದಲು ಈ ಎಲ್ಲವನ್ನು ಬರೀ ನಕ್ಷೆಯಲ್ಲಿ ತೋರಿಸಿ ನಂತರ ಪಾರ್ಕಿಂಗ್ ಜಾಗದಲ್ಲಿ ಅಂಗಡಿಗಳು, ಮೂತ್ರಾಲಯದ ಜಾಗದಲ್ಲಿಯೂ ಸಣ್ಣದೊಂದು ಅಂಗಡಿ ಹೀಗೆ ಮುಖ್ಯರಸ್ತೆಯಲ್ಲಯೇ ಕಾಂಪ್ಲೆಕ್ಸ್ಗಳು ನಿರ್ಮಾಣ ಮಾಡಿ, ಅಂಗಡಿಗಳ ಮಾಲೀಕರು, ಬಾಡಿಗೆದಾರರು ತಮ್ಮ ತಮ್ಮ ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ, ಸಂಚಾರಕ್ಕೆ ತೊಡಕುಂಟುಮಾಡುತ್ತಿದ್ದಾರೆ.
ಇದೆಲ್ಲವು ಮಹಾನಗರಪಾಲಿಕೆಯ ದಪ್ಪ ತೊಗಲಿನ ಅಧಿಕಾರಿಗಳಿಗೆ ಗೊತ್ತಿದ್ದರೂ ಏಕೆ ಸುಮ್ಮನೆ ಕೈಕಟ್ಟಿ ಕುಳಿತಿರುವುದು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಭ್ರಷ್ಟ ಅಧಿಕಾರಿಗಳ ಕೈಗೆ ಸಿಲುಕಿ, ಇಡೀ ವ್ಯವಸ್ಥೆಯೆ ಬುಡಮೇಲಾಗುತ್ತಿದ್ದು, ಇದಕ್ಕೆ ಯಾರು ಹೊಣೆ?

LEAVE A REPLY

Please enter your comment!
Please enter your name here