ಕೊಲೆಗೆ ಯತ್ನಿಸಿದ್ದ ನಾಲ್ವರಿಗೆ ಜೈಲು ಶಿಕ್ಷೆ

0
1300

ಕಲಬುರಗಿ ಫೆ 11: ವ್ಯಕ್ತಿಯೊಬ್ಬನನ್ನು ಕೊಲ್ಲಲು ಯತ್ನಿಸಿ ಗಾಯಗೊಳಿಸಿದ ನಾಲ್ವರಿಗೆ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಖಲಾಕ್ಷ ಪಾಲನ್ ಅವರು 3 ರ‍್ಷ ಶಿಕ್ಷೆ ಮತ್ತು ತಲಾ 10 ಸಾವಿರ ರೂ ದಂಡ ವಿಧಿಸಿ ತರ‍್ಪು ನೀಡಿದ್ದಾರೆ. 2017 ಅಕ್ಟೋಬರ್ 2 ರಂದು ನಡೆದ ಈ ಘಟನೆಯಲ್ಲಿ ಪ್ರವೀಣ ಎಂಬಾತನ ಮೇಲೆ ಕೊಲೆ ಯತ್ನ ನಡೆಸಲಾಗಿತ್ತು .
ಆರೋಪಿಗಳಾದ ಮಹಾವೀರ ಮುತ್ತಂಗಿ ಹಂಗರಗಾ, ಚೇತನ ಹೈಬತಿ ಹಂಗರಗಾ, ಶಿವಕುಮಾರ ಅಲಿಯಾಸ್ ಡೂಗ್ ಶಿವ್ಯಾ, ಮತ್ತು ಆಕಾಶ ಗುತ್ತೇದಾರ ಶಿಕ್ಷೆಗೊಳಗಾದವರು.ಮಹಾವೀರ ಮುತ್ತಂಗಿಗೆ ಕಲಂ 326 ಐಪಿಸಿ ಅಡಿಯಲ್ಲಿನ ಅಪರಾಧಕ್ಕಾಗಿ ಹೆಚ್ಚುವರಿಯಾಗಿ 2 ರ‍್ಷ ಕಠಿಣ ಶಿಕ್ಷೆ ಮತ್ತು ರೂ 5,000 ರೂ ದಂಡ ವಿಧಿಸಲಾಗಿದೆ.
ದಂಡದಿಂದ ಬಂದ ಹಣದಲ್ಲಿ ಫರ‍್ಯಾದಿ ಪ್ರವೀಣನಿಗೆ . 25,000 ರೂ ಮತ್ತು ಗಾಯಾಳು ವಿನಾಯಕನಿಗೆ
ರೂ.25,000 ರೂ ಪರಿಹಾರ ನೀಡಲು ಆದೇಶಿಸಿರುತ್ತಾರೆ. ಹಲ್ಲೆಯಲ್ಲಿ ಪಾಲ್ಗೊಂಡ ಬಾಲಾಪರಾದಿಯü ವಿರುದ್ಧ
ಬಾಲ ನ್ಯಾಯಾಮಂಡಳಿಗೆ ದೋಷಾರೋಪಣ ಪತ್ರ ಸಲ್ಲಿಸಿರುತ್ತಾರೆ.ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಎಸ್. ಆರ್ ನರಸಿಂಹಲು ಸಾಕ್ಷಾಧಾರಗಳನ್ನು ಮತ್ತು ವಾದವನ್ನು ಮಂಡಿಸಿದ್ದರು.

LEAVE A REPLY

Please enter your comment!
Please enter your name here