ಕಲಬುರಗಿ, ಫೆ. 11: ನಗರದಲ್ಲಿ ವ್ಯಾವಾರ ವಹಿವಾಟು ನಡೆಸಬೇಕಾದರೆ ಸಾಮಾನ್ಯವಾಗಿ ಮಹಾನಗರಪಾಲಿಕೆಯಿಂದ ಪರವಾನಿಗೆಗಾಗಿ ಟ್ರೀಡ್ ಲೈಸೆನ್ಸ್ ನೀಡುತ್ತಾರೆ, ಆದರೆ ಇಲ್ಲಿ ನೂರಕ್ಕೆ ಶೇ. 60ರಷ್ಟು ಅಂಗಡಿಗಳಿಗೆ ಟ್ರೇಡ್ ಲೈಸೆನ್ಸ್ ಇಲ್ಲ, ಇದಕ್ಕೆ ಕಾರಣ ಕೇಳಿದರೆ ಅಂಗಡಿಗಳ ಮಾಲಿಕರಿಗೆ ನೋಟಿಸ್ ನೀಡಿದ್ದೇವೆ, ನಂತರದ ದಿನಗಳಲ್ಲಿ ಪರವಾನಿಗೆ ನೀಡಲಾಗುವುದು ಎಂದು ಮಹಾನಗರಪಾಲಿಕೆಯ ಕಂದಾಯ ನಿರೀಕ್ಷರ ಉತ್ತರ.
ಸ್ವಾಮಿ, ಎಷ್ಟು ಅಂಗಡಿಗಳಿಗೆ ನೋಟಿಸ್ ನೀಡಿದ್ದಾರಾ? ಅದರಲ್ಲಿ ಎಷ್ಟು ಅಂಗಡಿಗಳು ಲೈಸೆನ್ಸ್ ಪಡೆದುಕೊಂಡಿವೆ? ಲೈಸೆನ್ಸ್ಗಾಗಿ ಮಹಾನಗರಪಾಲಿಕೆಗೆ ಅಲೆದಾಡಿದರೂ ಲೈಸೆನ್ಸ್ ದೊರೆಯುತ್ತಿಲ್ಲ ಎಂಬುದು ಅಂಗಡಿ ಮಾಲೀಕರುಗಳ ಗೋಳಾಗಿದೆ.
ಏನು ಮಾಡುತ್ತಿದ್ದಾರೆ ಅಧಿಕಾರಿಗಳು? ಏನು ಮಾಡುತ್ತಿದ್ದಾರೆ ಆರ್.ಐಗಳು, ಬರೀ ಸಂಬಳ ಬಂದರೆ ಸಾಕು, ನಮಗೆ ಎಂಬುದಷ್ಟೆ ಇವರ ಕಾರ್ಯವೈಖರಿಯಾಗಿದೆ.
ಕೂಡಲೇ ಮಹಾನಗರಪಾಲಿಕೆ ಎಚ್ಚೆತ್ತು ಈಗಲಾದರೂ ಲೈಸೆನ್ಸ್ ಇಲ್ಲದ ಅಂಗಡಿಗಳನ್ನು ಬಂದ್ ಮಾಡಬೇಕು, ಲೈಸೆನ್ಸ್ಗಾಗಿ ಅಲೆದಾಡುವ ವ್ಯಾಪಾರಸ್ಥರಿಗೆ ಕೂಡಲೇ ಲೈಸೆನ್ಸ್ ಕೊಡುವ ವ್ಯವಸ್ಥೆ ಮಾಡಬೇಕು ಎಂಬುದು ವ್ಯಾಪಾರಸ್ಥರ ಕೂಗಾಗಿದೆ.
Home Featured Kalaburagi ಕಲಬುರಗಿ ನಗರದಲ್ಲಿ 100ಕ್ಕೆ ಶೇ. 60ರಷ್ಟು ವ್ಯಾಪಾರ ಮಳಿಗೆಗಳಿಗೆ ಟ್ರೇಡ್ ಲೈಸೆನ್ಸ್ ಇಲ್ಲ?