ಒಳ ಮೀಸಲಾತಿಗಾಗಿ ಸರಕಾರದ ವಿರುದ್ಧ ಉಗ್ರ ಹೋರಾಟ: ಷಡಕ್ಷರಿಮುನಿ ಸ್ವಾಮಿಜಿ

0
896

ಕಲಬುರಗಿ, ಫೆ. 7: ಮಾದಿಗ ಮತ್ತು ಮಾದಿಗ ಸಂಬAಧಿಸಿದ ಸುಮಾರು 45ಕ್ಕೂ ಹೆಚ್ಚು ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಹಲವಾರು ಹೋರಾಟ ಮಾಡುತ್ತ ಬಂದರೂ, ಇಲ್ಲಿಯುವರೆಗೆ ಯಾವುದೇ ಪ್ರಯೋಜವಾಗಿಲ್ಲ ಮತ್ತು ಆಗುವ ಲಕ್ಷಣಗಳು ಗೋಚರಿಸುತ್ತಿಲ್ಲ ಈ ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಸಮಾಜ ಸಂಘಟಿಸಿ ಬರುವ ಮಾರ್ಚ ಎರಡನೇ ವಾರದಲ್ಲಿ ಸರಕಾರದ ವಿರುದ್ಧ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಕೋಡಿಹಳ್ಳಿ ಆದಿಚಾಂಬವ ಬ್ರಹ್ಮನಠದ ಶ್ರೀ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮಿಜಿ ಹೇಳಿದ್ದಾರೆ.
ಕಳೆದ ಸುಮಾರು ವರ್ಷಗಳಿಂದ ಸರಕಾರ ನೇಮಿಸಿದ ನ್ಯಾ. ಎ. ಜೆ. ಸದಾಶಿವ ಆಯೋಗದ ವರದಿಯನ್ನು ವಿಧಾನ ಮಂಡಲದಲ್ಲಿ ಮಂಡಿಸಿ, ಚರ್ಚಿಸದೇ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡದ ರಾಜ್ಯ ಸರಕಾರ ಜಾಣ ಕಿವುಡತನದಿಂದ ಸರಕಾರ ವರದಿಯನ್ನು ಕಸದ ಬುಟ್ಟಿಗೆ ಎಸೆದಿದೆ ಎಂದರು.
ಅವರಿAದಿಲ್ಲಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಈಗಾಗಲೇ ರೈಲು ರೋಖೋ, ಅರೆ ಬೆತ್ತಲೆ ಮೆರವಣಿಗೆ, ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನಕ್ಕೆ ಮುತ್ತಿಗೆ ಹೀಗೆ ಹಲವಾರು ಹೋರಾಟಗಳು ಮಾಡುತ್ತ ಬಂದರೂ ಕೂಡಾ ಸರಕಾರ ಕ್ಯಾರೆ ಅನ್ನದೇ ತನ್ನ ಮೊಂಡು ಧೋರಣೆಯನ್ನು ಮುಂದುವರೆಸಿಕೊAಡು, ಶೋಷಿತ ಮಾದಿಗ ಮತ್ತು ಮಾದಿಗ ಸಮುದಾಯವನ್ನು ಒಳ ಮೀಸಲಾತಿಯಿಂದ ವಂಚಿತಗೊಳಿಸಿದೆ ಎಂದರು.
ಒಳ ಮೀಸಲಾತಿಗಾಗಿ ಬರುವ ಮಾರ್ಚ ಮೊದಲ ವಾರದಲ್ಲಿ ಪಾದಯಾತ್ರೆ ಮೂಲಕ ಬೆಂಗಳೂರಿಗೆ ತೆರಳಿ ಬ್ರಹತ್ ಸಮಾವೇಶ ಮಾಡಲಾಗುವುದು ಎಂದು ಅವರು ಈ ಸಮಾವೇಶಕ್ಕೆ ಪಕ್ಷಾತೀತವಾಗಿ ಎಲ್ಲ ಸಮುದಾಯದ ರಾಜಕೀಯ ಮುಖಂಡರು, ಶಾಸಕರುಗಳು, ಸಚಿವರುಗಳು, ಮುಖಂಡರು, ಬುದ್ದಿ ಜೀವಿಗಳು ಮತ್ತು ಸಣ್ಣ ಸಣ್ಣ ಶೋಷಿತ ಅಸ್ತçö್ಯಶ್ಯ ಸಮುದಾಯಗಳು ಎಸ್ಸಿ ಮೀಸಲಾತಿಗೆ ಒಳಪಡುವ ಜಾತಿಯ ಮುಖಂಡರು ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡೋರ ಕಕ್ಕಯ್ಯಾ ಸಮಾಜ (ಪ.ಜಾ.) ಸಂಘದ ನೂತನ 2021ನೇ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ಪತ್ರಿಕಾ ಗೋಷ್ಠಿಯಲ್ಲಿ ಚನ್ನಯ್ಯ ಸ್ವಾಮಿಜಿ ಮಾರ್ಕಂಡಮುನಿ ಸ್ವಾಮಿಜಿ, ಬ್ರಹ್ಮಾನಂದಮುನಿ ಸ್ವಾಮಿಜಿ, ಶಿವಶರಣ ಹರಳಯ್ಯ ಸ್ವಾಮಿಜಿ, ಡೋಹರ ಗುರುಪೀಠದ ಗುರು ಮಾತೆ ನಂದಾ ತಾಯಿ ಕೊಪ್ಪಳದ ಗದಗೆಪ್ಪಜ್ಜನವರು, ಮಾತಂಗ ಸ್ವಾಮಿಜಿಯವರುಗಳು ಸೇರಿದಂತೆ ಹಲವಾರು ಮಾದಿಗ ಸಮಾಜದ ಮುಖಂಡರಾದ ಶಾಮ ನಾಟೀಕರ, ಪರಮೇಶ್ವರ ಖಾನಾಪೂರ, ಗುರುರಾಜ ಭಂಡಾರಿ, ದಶರಥ ಕಲಗುರ್ತಿ, ನಾಗರಾಜ ಗುಂಡಗುರ್ತಿ, ಭೀಮಣ್ಣ ಬಿಲ್ಲವ್, ಚಂದ್ರಿಕಾ ಪರಮೇಶ್ವರ, ಪ್ರತಿಭ ಭಾವೆ, ಕಾಶಿ ಹಾದಮನಿ ಸೇರಿದಂತೆ ಇನ್ನು ಅನೇಕರು ಉಪಸ್ಥತರಿದ್ದರು.

LEAVE A REPLY

Please enter your comment!
Please enter your name here