ಕುಸನೂರ ಗ್ರಾ.ಪಂ.ಗೆ ಅಧ್ಯಕ್ಷರಾಗಿ ಶ್ರೀಮತಿ ಸಂಗಮ್ಮ ಪಾಟೀಲ ಆಯ್ಕೆ

0
1178

ಕಲಬುರಗಿ, ಫೆ. 5: ಕುಸನೂರ ಗ್ರಾಮ ಪಂಚಾಯತ್‌ಗೆ ಅಧ್ಯಕ್ಷರಾಗಿ ಶ್ರೀಮತಿ ಸಂಗಮ್ಮ ಅಮೃತರಾವ ಪಾಟೀಲ್ ಹಾಗೂ ಪರಮೇಶ್ವರ ಶಿವಪುತ್ರ ಭಟ್ಟರ್ಕಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕುಸನೂರ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿತ್ತು. ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಪ.ಜಾ. ಪುರುಷ ಮೀಸಲಾಗಿತ್ತು.
19 ಸದಸ್ಯ ಬಲದ ಈ ಗ್ರಾಮ ಪಂಚಾಯತ್‌ನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಸಂಗಮ್ಮ ಅವರಿಗೆ 14 ಮತ್ತು ಉಪಾಧ್ಯಕ್ಷ ಸ್ಥಾನದ ಪರಮೇಶ್ವರ ಅವರಿಗೂ ಸಹ 14 ಮತಗಳು ಬಂದು ಆಯ್ಕೆಯಾದರು.
ಉಪಾಧ್ಯಕ್ಷ ಸ್ಥಾನಕ್ಕೆ ಒಟ್ಟು ಇಬ್ಬರು ನಾಮಪತ್ರ ಸಲ್ಲಿಸಿದ್ದರು ಆರಂಭದಲ್ಲಿ ನಾಮಪತ್ರ ಸಲ್ಲಿಸಿದ್ದ ಆತ್ಮಾನಂದ ಅಮೃತರಾವ ಶಿವಕೇರಿ ಅವರ ನಾಮಪತ್ರ ತಿರಸ್ಕೃತÀವಾದ ಬಗ್ಗೆ ವಿವಿವಾದ ಎದ್ದು ನಂತರ ಬಗೆಹರೆದು ಮತ್ತೆ ಅವರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಯಿತು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶ್ರೀಮತಿ ದೇವಿಕಾ ರೇವಣಸಿದ್ದ ಅವರಿಗೆ 5 ಮತಗಳು ಮತ್ತು ಉಪಾಧ್ಯಕ್ಷ ಸ್ಥಾಣಕ್ಕೆ ಸ್ಪರ್ಧಿಸಿದ್ದ ಆತ್ಮಾನಂದ ಅವರಿಗೂ ಕೂಡಾ 5 ಮತಗಳು ಬಿದ್ದವು.

LEAVE A REPLY

Please enter your comment!
Please enter your name here