ಕಲಬುರಗಿ, ಫೆ. 4: ಕೇಂದ್ರ ಸರಕಾರದ ದೌರ್ಜನ್ಯ ಹಾಗೂ ದಬ್ಬಾಳಿಕೆಯನ್ನು ವಿರೋಧಿಸಿ ಮತ್ತು ಕರಾಳ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವAತೆ ಆಗ್ರಹಿಸಿ ಕಿಸಾನ್ ಸಂಯುಕ್ತ ಮೋರ್ಚಾದ ಅಖಿಲ ಭಾರತ ಸಮಿತಿಯ ರಸ್ತಾ ರೋಕೋ ಕರೆಗೆ ಕಲಬುರಗಿಯ ಸಂಯುಕ್ತ ಹೋರಾಟ ಸಮಿತಿಯು ಬೆಂಬಲಿಸಿ ರಸ್ತೆ ತಡೆ ನಡೆಸಲಿದೆ ಎಂದು ರೈತಪರ ಸಂಘಟನೆಯ ಶೌಕತಅಲಿ ಆಲೂರ ಅವರು ಹೇಳಿದ್ದಾರೆ.
ಅವರಿಂದಿಲ್ಲಿ ಪತ್ರಿಕಾ ಭವನದಲ್ಲಿ ಮಾತನಾಡುತ್ತ, ಕೇಂದ್ರ ಸರಕಾರ ಒತ್ತಾಯಪೂರ್ವಕವಾಗಿ ರೈತರ ಮೇಲೆ ಹೇರಲು ಉದ್ದೇಶಿಸಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ, ಹೋರಾಟ ನಿರತ ರೈತ ನಾಯಕರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ವಾಪಸ್ಸುಪಡೆಯಬೇಕು, ಅಲ್ಲದೇ ಬಂಧಿತ ಪತ್ರಕರ್ತರನ್ನು ಬೇಷರತ್ತಾಗಿ ಬಿಡುಗಡೆ ಮಾಡಿ ಆರೋಪಮುಕ್ತ ಮಾಡಬೇಕು ಹೀಗೆ ಹಲವಾರು ಬೇಡಿಕೆಗಳಿಗಾಗಿ ಫೆ. 6ರಂದು ಉದ್ದೇಶಿಸಲಾಗಿರು ರಸ್ತೆ ತಡೆ ಚಳುವಳಿಗೆ ಕಲಬುರಗಿಯಲ್ಲಿ ರಾಮ ಮಂದಿರದ ರಿಂಗ್ ರಸ್ತೆಯಲ್ಲಿ ಮಧ್ಯಾಹ್ನ 12 ರಿಂದ 3 ಗಂಟೆಗಳ ಕಾಲ ರಸ್ತೆ ತಡೆ ಚಳುವಳಿ ನಡೆಸಲಾಗುವುದು ಎಂದು ವಿವರಿಸಿದರು.
ಮೋದಿ ಸರಕಾರದ ಸರ್ವಾಧಿಕಾರ ಧೋರಣೆಯನ್ನು ಇಡೀ ರೈತ ಸಮುದಾಯ ಖಂಡಿಸುತ್ತದೆ, ದೆಹಲಿಯಲ್ಲಿ 26 ಜನವರಿಯಂದು ನಡೆದ ಟ್ರಾö್ಯಕ್ಟರ್ ರ‍್ಯಾಲಿಯಲ್ಲಿ ರೈತರು ಯಾರೂ ಗಲಭೆ ದೊಂಬಿ ಮಾಡಲಿಲ್ಲ, ಒಂದೇರಡು ದಾರುಣ ಘಟನೆಗಳು ನಡೆದಿದ್ದು ಇದರಲ್ಲಿ ರೈತರು ಭಾಗಿ ಯಾಗಿರಲಿಲ್ಲ, ಪಟ್ಟಭದ್ರ ಶಕ್ತಿಗಳು ಈ ಗಲಭೆ ನಡೆಸಿ ರೈತರಿಗೆ ಕೆಟ್ಟ ಹೆಸರು ತರುವಂತೆ ಮಾಡಲು ಆಡಳಿತರೂಢ ಬಿಜೆಪಿ ಸರಕಾರದ ಹುನ್ನಾರ ನಡೆಸಿತ್ತು ಎಂದು ಅವರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘಟನೆಯ ಮುಖಂಡರಾದ ಭೀಮಾಶಂಕರ ಮಾಡ್ಯಾಳ, ಮಹೇಶ ಎಸ್.ಬಿ., ಡಿಎಸ್‌ಎಸ್‌ನ ಅರ್ಜುನ ಭದ್ರೆ, ಕಾಂಗ್ರೆಸ್ ಮುಖಂಡ ಶಾಮ ನಾಟೀಕರ್, ಎ.ಐ.ಟಿ.ಯು.ಸಿ. ಜಿಲ್ಲಾ ಅಧ್ಯಕ್ಷ ವಿ. ಜಿ. ದೇಸಾಯಿ ಅವರುಗಳು ಉಪಸ್ಥಿತರಿದ್ದರು.
ಫೆ. 6ರ ರೈತರ ರಸ್ತೆ ತಡೆ ಹೋರಾಟಕ್ಕೆ ಸಂಯುಕ್ತ ಹೋರಾಟ ಸಮಿತಿ ಬೆಂಬಲ
Total Page Visits: 1873 - Today Page Visits: 1
Deenalu ondondu strike madidare halli kandi badu hege vichar madri strike madvare