ರುದ್ರವಾಡಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಕ್ರಮ, ಪ್ರಕ್ರಿಯೆ ಸ್ಥಗಿತಕ್ಕೆ ಡಿಸಿಗೆ ಮನವಿ

4
3223

ಕಲಬುರಗಿ, ಫೆ. 3: ಆಳಂದ ತಾಲೂಕಿನ ರುದ್ರವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ ಅಕ್ರಮ ವೆಸಗಿದೆ ಎಂದು ಚುನಾವಣಾ ಫಲಿತಾಂಶಕ್ಕೆ ತಡೆ ನೀಡುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಈ ಮನವಿ ಪತ್ರ ಸಲ್ಲಿಸಿದ ಅನಕ್ಷರಸ್ಥ ಗ್ರಾ.ಪಂ. ಸದಸ್ಯೆರಾದ ಶ್ರೀಮತಿ ಅಪ್ಸರಾ ಬೇಗಂ, ಶ್ರೀಮತಿ ಲಲಿತಾಬಾಯಿ ಶ್ರೀಮಂತ ಅವರು ತಮ್ಮ ದೂರಿನಲ್ಲಿ ಈ ಪಂಚಾಯತ್‌ನ ಅಧ್ಯಕ್ಷ, ಉಪಾಧ್ಯಕ್ಷ ಪ್ರಕಿರಯೇ ಚುನಾಣಾಧಿಕಾರಿಯಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕ ಅಧಿಕಾರಿಗಳಾದ ಶಿವಮೂರ್ತಿ ಕುಂಬಾರ ಅವರು ತಮ್ಮ ಕೈಯಲ್ಲಿದ್ದ ಮತ ಪತ್ರವನ್ನು ಕಸಿದುಕೊಂಡು ತಮ್ಮ ವಿರೋಧ ಬಣದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾದ ಪ್ರಕಾಶ ಭೂಸಣಗಿ ಅವರ ಹೆಸರಿನ ಮುಂದೆ ಒತ್ತಿ, ಮತಪತ್ರವನ್ನು ನಮ್ಮಗಳ ಮುಂದೆಯೇ ಡಬ್ಡಿಯಲ್ಲಿ ಹಾಕುವ ಮೂಲಕ ಚುನಾವಣಾ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿ, ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.
ರುದ್ರವಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ನಿನ್ನೆ ಮಂಗಳವಾರ 2ರಂದು ಚುನಾವಣೆ ನಡೆದಿತ್ತು.
ಅನಕ್ಷರಸ್ಥರಾದ ನಮಗೆ ಓದಲು ಬರುವುದಿಲ್ಲ, ಈ ಹಿನ್ನೆಲೆಯಲ್ಲಿ ಪ್ರಕಾಶ ಪಾಟೀಲ್ ಕೋತನ ಹಿಪ್ಪರಗಾ ಅವರಿಗೆ ಮತದಾನ ಮಾಡಲು ಸಹಾಯ ಮಾಡುವಂತೆ ಅಧಿಕಾರಿಗಳಿಗೆ ಕೇಳಿದಾಗ ಈ ಘಟನೆ ನಡೆದಿದೆ ಎಂದು ಅವರು ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಉಪಾಧಕ್ಷ ಸ್ಥಾನಕ್ಕೂ ನಡೆದ ಚುನಾವಣೆಯಲ್ಲಿಯೇ ಈ ತರಹದೆ ಅಕ್ರಮವೆಸಗಿದ್ದಾರೆಂದು ಅವು ಹೇಳಿದ್ದಾರೆ.
ನಂತರ ಚುನಾವಣಾ ಫಲಿತಾಂಶ ಘೋಷಣೆಯಾದಾಗ ಅಧ್ಯಕ್ಷ ಸ್ಥಾನಕ್ಕೆ 11 ಮತಗಳು ಬಿದ್ದಿರುತ್ತವೆ, ಹಾಗೇಯೇ ಉಪಾಧ್ಯಕ್ಷ ಸ್ಥಾನಕ್ಕೆ ಸ್ವಂತ ವಿವೇಚನೆಯಿಂದ ಚಲಾವಣೆ ಮಾಡಿದ ಮತಗಳು ಫಲಿತಾಂಶ ಘೋಷಣೆಯಾದಾಗ 13 ಮತಗಳು ಪಡೆದು ಜಯಗಳಿಸಿರುತ್ತಾರೆ. ಈ ಚುನಾವಣೆಯ ಸಂದರ್ಭಧಲ್ಲಿ ವಿಡೀಯೋ ಚಿತ್ರಿಕರಣಿಸಿಕೊಂಡಿರುವುದು ಹಾಗೂ ನಮ್ಮ ಸ್ವಂತ ಹೇಳಿಕೆಯನ್ನು ಗಮನದಲಿಟ್ಟುಕೊಂಡು ಕುಲಂಕೂಷವಾಗಿ ಪರಿಶೀಲಿಸಿ ಚುನಾವಣಾ ಅಕ್ರಮವೆಸಗಿರುವ ಚುನಾಣಾಧಿಕಾರಿಗಳ ವಿರುದ್ಧ ತನಿಖೆ ನಡೆಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಂಡು ಈ ಚುನಾವಣಾ ಪ್ರಕ್ರಿಯೇ ಸಂಪೂರ್ಣವಾಗಿ ರದ್ದುಪಡಿಸಿ, ಮತ್ತೋಮ್ಮೆ ಪಾರದರ್ಶಕವಾಗಿ ಚಉನಾವಣೆ ಜರುಗಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

Total Page Visits: 2808 - Today Page Visits: 1

4 COMMENTS

  1. ಬಿಜೆಪಿ ಎಲ್ಲಿ ಗೆದ್ರು ವಿರೋಧಿಗಳು ಹೇಳೋದು ಒಂದೇ EVM ಸರಿ ಇಲ್ಲಾ ಚುನಾವಣಾಧಿಕಾರಿ ಸರಿ ಇಲ್ಲಾ 😅

    ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿನೆ

  2. ಓ ದೇವರೇ!, “ಅನಕ್ಷರಸ್ಥರು”…
    ಈ ಕಾಂಗ್ರೆಸ್ ಪಕ್ಷದ ಜನರು ಚುನಾವಣೆಯಲ್ಲಿ ಸೋತರೆ ಇವಿಎಂ ಅಥವಾ ಅಧಿಕಾರಿಗಳನ್ನು ದೂಷಿಸುವ ಅಭ್ಯಾಸವಿದೆ .. ದೇವರು ಮಾತ್ರ ನಿಮ್ಮ ಪಕ್ಷವನ್ನು ಉಳಿಸಬಹುದು ..

  3. Paap Chairman ga aste kadimi biddav… Vice president ge ade “ಅನಕ್ಷರಸ್ಥರು” correct vote madyar.. idu henga pa …

LEAVE A REPLY

Please enter your comment!
Please enter your name here