ಒಳಚರಂಡಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಸಫಾಯಿ ಕರ್ಮಚಾರಿಗಳ ಸಾವು

0
3341

ಕಲಬುರಗಿ, ಜ. 28: ಒಳ ಚರಂಡಿ ಸ್ವಚ್ಛಗೊಳಿಸುವಾಗ ಇಬ್ಬರು ಸಫಾಯಿ ಕರ್ಮಚಾರಿಗಳು ಮೃತಪಟ್ಟರೆ, ಓರ್ವ ಸಫಾಯಿ ಕರ್ಮಚಾರಿಯ ಸ್ಥಿತಿ ಗಂಭೀರವಾಗಿದೆ.
ಈ ದಾರುಣ ಘಟನೆ ಇಂದು ನಗರದ್ ಕೈಲಾಸ ನಗರದಲ್ಲಿ ನಡೆದ ಬಗ್ಗೆ ವರಿಯಾಗಿದ್ದು, ಒಳ ಚರಂಡಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಲಾಲ್ ಅಹ್ಮದ 25 ಮತ್ತು ರಶೀದ 30 ಎಂಬವರು ಮೃತಪಟ್ಟರೆ ರಾಜು ಎಂಬುವನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಜಲಮಂಡಳಿಯಲ್ಲಿ ಗುತ್ತೆಗೆ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಅಧಿಕಾರಿಗಳ ಒತ್ತಡದಿಂದ ಕೆಟ್ಟು ನಿಂತ ಒಳಚರಂಡಿಗೆ ಇಳಿದು ಸ್ವಚ್ಛಗೊಳಿಸುವಾಗಿ ಈ ದುರ್ಘಟನೆ ಸಂಭವಿಸಿದೆ.
20 ಅಡಿ ಆಳದ ಈ ಒಳಚರಂಡಿಯಲ್ಲಿ ಮೊದಲು ಒಬ್ಬ ಸಫಾಯಿ ಕರ್ಮಚಾರಿ ಹೋದಾಗ ಆತ ಉಸಿರುಗಟ್ಟಿ ಒಳಗೆ ಕುಸಿದಾಗ ಆತನನ್ನು ಉಳಿಸಲು ಮತ್ತೋರ್ವ ಆ ಚರಂಡಿಯಲ್ಲಿಯೇ ಬಿದ್ದು ಸಾವನ್ನಪ್ಪಿದ್ದಾನೆಂದು ಹೇಳಲಾಗಿದೆ.

ಸಫಾಯಿ ಕರ್ಮಚಾರಿಗಳು ಒಳಗೆ ಇಳಿಯಲು ಹಿಂದೇಟು ಹಾಕಿದರೂ ಅಧಿಕಾರಿಗಳ ಒತ್ತಾಯದಿಂದ ಅವರನ್ನು ಇಳಿಸಿದ್ದರಿಂದ ಕಾರ್ಮಿಕರ ಸಾವು ಸಂಭವಿಸಿದೆ ಎಂದು ಆರೋಪಿಸಿ ಮೃತರ ಕಟುಂಬಸ್ಥರು ಸೇರಿ ನೂರಾರು ಜನರು ನಗರದ ಜಿಮ್ಸ್ ಆಸ್ಪತ್ರೆಗೆ ಮುಂದಿನ ರಸ್ತೆಯಲ್ಲಿ ಧರಣಿ ಕುಳಿತು ಜಲ ಮಂಡಳಿ ಅಧಿಕಾರಿಗಳ ವಿರುದ್ಧ ಆಕ್ತೋಶ ವ್ಯಕ್ತಪಡಿಸುತ್ತಿದ್ದಾರೆ.

ಯಂತ್ರಗಳ ಮೂಲಕ ಮಾಡುಬೇಕಿದ್ದ ಕೆಲಸನವನ್ನು ಮನುಷ್ಯರ ಸಹಾಯದಿಂದ ಮಾಡಲು ಹೋಗಿ ಈ ಘಟನೆ ನಡೆದಿದ್ದು, ತಕ್ಷಣ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಅಲ್ಲದೇ ಮೃತರ ಕುಟುಂಬಗಳಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಪ್ರತಿಭಟನೆಗಿಳಿದ ಮುಖಂಡರ ಆಕ್ರೋಶವಾಗಿದೆ.
ರಸ್ತೆ ತಡೆ ನಡೆಸಲು ಯತ್ನಸಿ, ರಸ್ತೆ ಮೇಲೆ ಕುಳಿತ ಕುಟಂಬಸ್ಥರು ಹಾಗೂ ಜೀಮ್ಸ್ ಆಸ್ಪತ್ರೆಯ ಗೇಟ್ ಮುಂದುಗಡೆ ಪೋಲಿಸರ ವಿಶೇಷ ಪಹರೆ ನಿಯೋಜಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಈ ಘಟನೆ ಕುರಿತಂತೆ ರಾಘವೇಂದ್ರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here