ಲಸಿಕೆ ಪಡೆದವರು ಮದ್ಯಪಾನದಿಂದ ದೂರವಿರಿ

0
1094

ನವದೆಹಲಿ, ಜ.18- ಕೊರೊನಾ ಲಸಿಕೆ ಪಡೆದ ನಂತರ ಕಡ್ಡಾಯವಾಗಿ ಮದ್ಯಪಾನದಿಂದ ದೂರ ಇರಬೇಕು ಎಂಬ ಸೂಚನೆಯನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಎರಡು ಹಂತದ ಲಸಿಕೆ ಪಡೆದ ಮೊದಲ ಮೂರು ದಿನ ಹಾಲ್ಕೋಹಾಲ್ ಮಿಶ್ರಿತ ಯಾವುದೇ ಪಾನೀಯ ಸೇವನೆ ಮಾಡಬಾರದೆಂದು ಸೂಚಿಸಲಾಗಿದೆ.
ಅನಂತರ ಅತ್ಯಂತ ಕನಿಷ್ಠ ಪ್ರಮಾಣದ ಅಂದರೆ 30ಗ್ರಾಂ ನಷ್ಟು ಹಾಲ್ಕೋಹಾಲ್ ಹೊಂದಿರುವ ಪಾನಿಯವನ್ನು ದಿನ ಒಂದಕ್ಕೆ ಸೇವಿಸಬಹುದು. ಅದು ಕೂಡ ಅತ್ಯಂತ ಶೀತ ವಾತಾವರಣದಲ್ಲಿರುವ ಜನ ಹಾಲ್ಕೋಹಾಲ್ ಅನಿವಾರ್ಯ ಎಂಬ ಸಂದರ್ಭದಲ್ಲಿ ಸೇವನೆ ಮಾಡಬೇಕು. ಮೋಜಿಗಾಗಿ, ಶೋಕಿಗಾಗಿ ಹಾಲ್ಕೋಹಾಲ್ ಸೇವನೆ ಮಾಡುವುದು ಅಪಾಯಕಾರಿ ಎಂದು ಎಚ್ಚರಿಕೆ ನೀಡಲಾಗಿದೆ.
ಮೊದಲ ಹಾಗೂ ಎರಡನೇ ಹಂತದ ಲಸಿಕೆಗಳನ್ನು ಪಡೆದ ಬಳಿಕ ಮದ್ಯಪಾನ ಮಾಡಿದ್ದೇ ಆದರೆ ಲಸಿಕೆ ನಿರರ್ಥಕ್ಕಗೊಳ್ಳಲಿದೆ. ದೇಹದಲ್ಲಿ ಲಸಿಕೆ ಸೃಷ್ಟಿಸಬಹುದಾದ ರೋಗನಿರೋಧಕ ಶಕ್ತಿಯನ್ನು ಹಾಲ್ಕೋಹಾಲ್ ಹಾಳು ಮಾಡಲಿದೆ ಎಂದುವೈದ್ಯಕೀಯ ಸಂಶೋಧನೆಗಳು ತಿಳಿಸಿವೆ. ಹೀಗಾಗಿ ಲಸಿಕೆ ಪಡೆದವರು ಕಡ್ಡಾಯವಾಗಿ ಮದ್ಯಪಾನದಿಂದ ದೂರವಿರಬೇಕಾಗಿದೆ ಎಂದು ತಜ್ಞರು ಹೇಳಿದ್ದಾರೆ.

LEAVE A REPLY

Please enter your comment!
Please enter your name here