ಕಲಬುರಗಿ, ಜ. ೧೫: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಹಿಂದೂಗಳ ಅರಾಧ್ಯ ದೇವ ಶ್ರೀ ರಾಮನ ಭವ್ಯ ಮಂದಿರದ ನಿಧಿ ಸಂಗ್ರಹಣೆಗಾಗಿ ಇಂದು ಕಲಬುರಗಿಯ ಶ್ರೀ ಶರಣಬಸವೇರ್ಶವರ ಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ಪೂಜ್ಯ ಶರಣಬಸಪ್ಪಾ ಅಪ್ಪಾ ಅವರು ಶುಕ್ರವಾರ ಚಾಲನೆ ನೀಡಿದರು.
ಶರಣಬಸವೇಶ್ವರ ಸಂಸ್ಥಾನದಿoದ ಮಂದಿರ ನಿರ್ಮಾಣಕ್ಕಾಗಿ ೨೫ ಲಕ್ಷ ರೂ. ಗಳ ಕಾಣಿಕೆ ನೀಡುತ್ತಿರುವ ಡಾ. ಅಪ್ಪಾ ಅವರು ಈ ಸಂದರ್ಭದಲ್ಲಿ ಘೋಷಣೆ ಮಾಡಿದರು.
ಮಂದಿರ ನಿರ್ಮಾಣಕ್ಕಾಗಿ ಬರುವ ೧೭ರಿಂದ ಕರ್ನಾಟಕ ರಾಜ್ಯದಾದ್ಯಂತ ಕಲಬುರಗಿ ಸೇರಿ ಸುಮಾರು ೫ ಸಾವಿರ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಲಿದ್ದು, ಅವರಿಗೆ ತಮ್ಮ ಭಕ್ತಿಯಿದ್ದಷ್ಟು ಕಾಣಿಕೆ ನೀಡಬಹುದು ಎಂದೂ ತಿಳಿಸಿದ ಅವರು, ಈಗಾಗಲೇ ರೂ. ೧೦/-. ೧೦೦/- ೧೦೦೦/- ಮುದ್ರಿತ ಕೂಪನ್‌ಗಳ ಸಹಾಯದಿಂದ ಧನ ಸಂಗ್ರಹಣೆ ನಡೆಯಲಿದ್ದು, ಇನ್ನು ರೂ. ೨೦೦೦ ಕ್ಕಿಂತ ಅಧಿಕ ಮೊತ್ತ ನೀಡಿದ ಭಕ್ತರಿಗೆ ರಸೀದಿ ನೀಡಲಾಗುವುದು ಹಾಗೂ ಆ ಭಕ್ತರು ಭಾರತೀಯ ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಬಹುದಾಗಿದೆ ಎಂದು ಅವರು ವಿವರಿಸಿದರು.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಯೋಜನೆಯ ಅನ್ವಯ ಸಮಸ್ತ ಹಿಂದೂ ಸಮಾಜದಿಂದ ಮಂದಿರ ನಿರ್ಮಾಣಕ್ಕಾಗಿ ಧನ ಸಂಗ್ರಹಣೆಗೆ ತನ್ನ ಸಂಪೂರ್ಣ ಸಹಯೋಗ ನೀಡುವುದಾಗಿ ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದ್ದು, ದೇಶದಲ್ಲಿ ವಿ.ಹಿಂ.ಪ. ಕಾರ್ಯಕರ್ತರು, ಅಯೋಧ್ಯೆಯಲ್ಲಿನ ಶ್ರೀ ರಾಮ ಜನ್ಮಭೂಮಿ ಮಂದಿರದ ನಿರ್ಮಾಣಕ್ಕಾಗಿ ಹಾಗೂ ಅಲ್ಲಿನ ಇತೆ ಸೌಲಭ್ಯಗಳಿಗೆ ಅನುಕೂಲವಾಗುವಂತೆ ನಾಲ್ಕು ಲಕ್ಷ ಹಳ್ಳಿಗಳನ್ನು ೧೧ ಕೋಟಿ ಕುಟುಂಬಗಳನ್ನು ತಲುಪಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ದಾಕ್ಷಾಯಿಣಿ ಶರಣಬಸಪ್ಪಾ ಅಪ್ಪಾ, ಬಳಿರಾಮ ಮಹಾರಾಜ, ಬಸವರಾಜ ದೇಶಮುಖ, ಮಲ್ಲಿಕಾರ್ಜುನ ಮುಕ್ಕಾ, ಸಂಸದ ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ಶಶೀಲ್ ಜಿ. ನಮೋಶಿ ಅವರುಗಳು ಉಪಸ್ಥತಿತರಿದ್ದರು.