ಕಲಬುರಗಿ, ಜ. 15: ದೇಶಾದ್ಯಂತ ಬಹು ನಿರೀಕ್ಷಿತ ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಕರೋನಾ ಲಸಿಕೆ ನೀಡುವ ಕಾರ್ಯಕ್ರಮ ದಿನಾಂಕ: 16.01.2021ರಂದು ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ನಿರ್ದೇಶನದಂತೆ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 8 ಆರೋಗ್ಯ ಕೇಂದ್ರಗಳಲ್ಲಿ ಕರೋನಾ ಲಸಿಕೆಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಲಸಿಕೆ ನೀಡುವ ಆರೋಗ್ಯ ಕೇಂದ್ರಗಳು ಈ ಕೆಳಗಿನಂತಿವೆ,
ಕಲಬುರಗಿಯಲ್ಲಿ ಜಿಮ್ಸ್ ಆಸ್ಪತ್ರೆಯಲ್ಲಿ ಅಫಜಲಪೂರ, ಆಳಂದ, ಚಿಂಚೋಳಿ, ಚಿತ್ತಾಪೂರ, ಜೇವರ್ಗಿ, ಸೇಡಂ ತಾಲೂಕುಗಳಲ್ಲಿ ಆಯಾ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಗೂ ಅಫಜಲಪೂರ ತಾಲೂಕಿನ ಗೊಬ್ಬೂರ (ಬಿ) ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ವಿ.ವಿ. ಜೋತ್ಸಾö್ನ ಅವರು ತಿಳಿಸಿದ್ದಾರೆ.
ಈ ಕರೋನಾ ಲಸಿಕೆ ನೀಡುವ ಚಾಲನಾ ಕಾರ್ಯಕ್ರಮವನ್ನು ಪ್ರಧಾನಮಂತ್ರಿಗಳು, ನವದೇಹಲಿಯಲ್ಲಿ ಬೆಳಗ್ಗೆ 10:30 ಗಂಟೆಗೆ ಚಾಲನೆ ನೀಡಲಿದ್ದು, ನಂತರ ದೇಶಾದ್ಯಂತ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಲಸಿಕಾ ನೀಡುವ ಕಾರ್ಯಕ್ರಮವು ಬೆಳಗ್ಗೆ 11:00 ರಿಂದ ಸಾಯಂಕಾಲ 05:00 ಗಂಟೆಯವರೆಗೆ ಜರುಗುತ್ತದೆ. ಪ್ರತಿ ಲಸಿಕಾ ಕೇಂದ್ರಗಳಲ್ಲಿ ಕನಿಷ್ಠ 100 ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗುವುದು. ನಂತರ ಹಂತ ಹಂತವಾಗಿ ಲಸಿಕೆಯನ್ನು ನೀಡಲಾಗುವುದು.
ಕೋವಿಡ್-19 ಲಸಿಕಾ ನಿರ್ವಹಣಾ ಕಂಟ್ರೋಲ್ ರೂಮ್ ಮಾಡಲಾಗಿರುತ್ತದೆ. ಕೋವಿಡ್-19 ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಸಂಭವಿಸಿದ್ದಲ್ಲಿ ನಿರ್ವಹಣೆಗಾಗಿ (ಏಇಎಫ್‌ಐ ) ನಿರ್ವಹಣಾ ಘಟಕಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.