ತಿರುಪತಿಗೆ ಕಲಬುರಗಿಯಿಂದ ಹಾರಿದ ಪ್ರಥಮ ವಿಮಾನ

0
1347

ಕಲಬುರಗಿ ಜ 11: ಸಂಜಯ್ ಘೋಡಾವತ್ ಸಮೂಹದ ಸ್ಟಾರ್ ಏರ್ ಸಂಸ್ಥೆಯ ನಾಗರಿಕ ವಿಮಾನ ಸೋಮವಾರ ಕಲಬುರಗಿ ವಿಮಾನ ನಿಲ್ದಾಣದಿಂದ ತಿರುಪತಿಗೆ ಪ್ರಯಾಣ ಆರಂಭಿಸಿತು.
ವಿಮಾನ ನಿಲ್ದಾಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಸದ ಡಾ. ಉಮೇಶ ಜಾಧವ ತಿರುಪತಿ ವಿಮಾನ ಸಂಚಾರಕ್ಕೆ ಚಾಲನೆ ನೀಡಿದರು.
ಸಾಂಕೇತಿಕವಾಗಿ ಪ್ರಯಾಣಿಕರೊಬ್ಬರಿಗೆ ಅವರು ಬೋರ್ಡಿಂಗ್ ಪಾಸ್ ವಿತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕ ಮಾಲೀಕಯ್ಯ ಗುತ್ತೇದಾರ, ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಅಮರನಾಥ ಪಾಟೀಲ, ಪಾಲಿಕೆ ವಿಠ್ಠಲ ಜಾಧವ, ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರರಾವ್ ,ಸಂಜಯ್ ಘೋಡಾವತ್ ಸಮೂಹದ ಮಾರುಕಟ್ಟೆ ಮತ್ತು ಸಂವಹನ ವಿಭಾಗದ ಪ್ರಧಾನ ವ್ಯವಸ್ಥಾಪಕ ರಾಜ್ ಹೆಸಿ ಮತ್ತು ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದು ಪ್ರಯಾಣಿಕರಿಗೆ ಶುಭ ಕೋರಿದರು

LEAVE A REPLY

Please enter your comment!
Please enter your name here