ತೊಗರಿಗೆ ಪ್ರೋತ್ಸಾಹಧನ ಕೊಟ್ಟು ಖರೀದಿಗೆ ಆಗ್ರಹ- ಸಿಎಂ ಯಡಿಯೂರಪ್ಪನವರಿಗೆ ಡಾ. ಅಜಯ್ ಸಿಂಗ್ ಪತ್ರ

0
784

ಬೆಂಗಳೂರು/ಕಲಬುರಗಿ: ಪ್ರೋತ್ಸಾಹಧನ ಕೊಟ್ಟು ತೊಗರಿ ಖರೀದಿಗೆ ಮುಂದಾಗುವAತೆ ಸಿಎಂ ಯಡಿಯೂರಪ್ಪನವರಿಗೆ ವಿಧಾನ ಸಭೆೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಶಾಸಕ ಡಾ. ಅಜಯ್‌ಸಿಂಗ್ ಪತ್ರ ಬರೆದು ಗಮನ ಸೆಳೆದಿದ್ದಾರೆ.
ಕಲಬುರಗಿ ತೊಗರಿ ಕಣಜ. ಇಲ್ಲಿನ ರೈತರು ಬೆಳೆದ ಪ್ರಸಕ್ತ ಹಂಗಾಮಿನ ತೊಗರಿ ಖರೀದಿಗೆ ಅದಾಗಲೇ ತಮ್ಮ ಸರಕಾರ ಜಿಲ್ಲೆÉಯಲ್ಲಿ 153 ತೊಗರಿ ಖರೀದಿ ಕೇಂದ್ರ ಸ್ಥಾಪನೆ ಮಾಡಿದ್ದು ಹೆಸರು ನೋಂದಣಿ ಮಾಡಿಕೊಳ್ಳಲು ರೈತರಲ್ಲಿ ಕೋರಿದೆ, ಇದನ್ನು ಸ್ವಾಗತಿಸುತ್ತೇನೆ. ಆದರೆ ತೊಗರಿಗೆ ಕನಿಷ್ಟ 1, 500 ರು ಪ್ರೋತ್ಸಾಹಧನÀ ನೀಡುವ ಮೂಲಕ ಖರೀದಿಗೆ ಮುಂದಾಗಿರಿ ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ 113 ಖರೀದಿ ಕೇಂದ್ರಗಳನ್ನು ಹಾಗೂ ಕಲಬುರಗಿಯ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ 43 ಸೇರಿದಂತೆ ಒಟ್ಟು 153 ತೊಗರಿ ಖರೀದಿ ಕೇಂದ್ರಗಳ್ನು ಸ್ಥಾಪಿಸಲಾಗಿದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ತೊಗರಿ ಕಾಳು ಪ್ರತಿ ಕ್ವಿಂಟಾಲ್ಗೆ 6000 ರೂ.ಗಳ ದರದಲ್ಲಿ ಕಲಬುರಗಿ ಜಿಲ್ಲೆÉಯ ರೈತರಿಂದ ಖರೀದಿಸಲು ಒಟ್ಟು 153 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಬೆಂಬಲ ಬೆಲೆಗೆ ವಾರ್ಷಿಕ ನೀಡುತ್ತಿದ್ದ ಪ್ರೋತ್ಸಾಹಧನದ ಮೊತ್ತ ಇದುವರೆಗೂ ಘೋಷಣೆಯಾಗಿರೋದಿಲ್ಲ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ತೊಗರಿ ಖರೀದಿಗೆ ಬೆಂಬಲ ಬೆಲೆಗೆ ಕ್ವಿಂಟಾಲಿಗೆ 525 ರು ನಿಂದ 400 ರು ವರೆಗೂ ರಾಜ್ಯದ ಪಾಲಿನ ಪ್ರೋತ್ಸಾಹಧನ ಸೇರಿಸಿ ಕ್ವಿಂಟಾಲ್ ತೊಗರಿಗೆ ಬೆಲೆ ನಿಗದಿಪಡಿಸಿ ರೈತರಿಗೆ ಹಣ ನೀಡಲಾಗಿದೆ.
ಅದರಂತೆಯೇ ತಾವು ಇದೀಗ ತೊಗರಿ ರೈತರಿಗೆ 6 ಸಾ. ರು ಬೆಂಬಲ ಬೆಲೆಯ ಜೊತೆಗೇ ಪ್ರೋತ್ಸಾಹಧನ ರೂಪದಲ್ಲಿ ಕೊನೆಪಕ್ಷ 1, 500 ರು ನಿಗದಿಪಡಿಸಿ ಪ್ರತಿ ಕ್ವಿಂಟಾಲಿಗೆ 7, 500 ಸಾ. ರು ನಂತೆ ತೊಗರಿ ಖರೀದಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೊರೋನಾ ಕಾಲದಲ್ಲಿ ರೈತರು ಕಂಗಾಲಾಗಿದ್ದಾರೆ. ಅತಿವೃಷ್ಟಿ, ಮಳೆ, ನೆರೆಯಿಂದಲೂ ರೈತರು ಕಂಗಾಲಾಗಿದ್ದಾರೆ ಕಲಬುರಗಿ ಭಾಗದಲ್ಲಂತೂ ಬಿತ್ತಿದ ತೊಗರಿ 3 ಲಕ್ಷÀ ಹೆಕ್ರ‍್ಟರ ಹಾಳಾಗಿದೆ. ಹೀಗಾಗಿ ತೊಗರಿ ಇಳುವರಿಗೂ ಹೊಡೆತ ಬಿದ್ದಿದೆ. ಅಳಿದುಳಿದ ಇಳುವರಿ ಬಂದಾಗ ಬೆಲೆ ಸೂಕ್ತವಾಗಿ ರೈತರಿಗೆ ದೊರಕಿದರೆ ಅವರಿಗೆ ಅನುಕೂಲವಾಗಲಿದೆ. ಖರೀದಿ ಕೇಂದ್ರಗಲು ಸ್ಥಾಪಿತವಾಗುತ್ತಿವೆ, ಹೆಸರು ನೋಂದಣಿಯೂ ಶುರುವಾಗಿದೆ, ಪ್ರಕ್ರಿಯೆ ಶುರುವಾಗುವ ಮುನ್ನವೇ ತಾವು ತೊಗರಿಗೆ ಪ್ರೋತ್ಸಾಹಧನ ಘೋಷಣೆ ಮಾಡಿ ತೊಗರಿ ರೈತರ ನೆರವಿಗೆ ಬರಬೇಕು ಎಂದು ಡಾ. ಅಜಯ್ ಸಿಂಗ್ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತಿ ಕ್ವಿಂ. ತೊಗರಿಗೆ ಗರಿಷ್ಠ 550 ರೂ.ವರೆಗೆ ಪ್ರೋತ್ಸಾಹಧನನೀಡಲಾಗುತ್ತಿತ್ತು. ತಾವು ಬೀzರಗೆ ಭೇಟಿ ನೀಡಿದಾಗ, ಪ್ರತಿ ರೈತರಿಂದ 20 ಕ್ವಿಂ. ತೊಗರಿ ಖರೀದಿಸುವುದಾಗಿ ಭರವಸೆ ನೀಡಿದ್ದರು. ಅವರ ಈ ಭರವಸೆಯೂ ಕೇವಲ ವೇದಿಕೆಗಷ್ಟೇ ಸೀಮಿತವಾಗಿದೆ ಎಂದು ಸಿಎಂ ಅವರನ್ನು ನೆನಪಿಸಿದ್ದಾರೆ.
ಈ ಬಾರಿ ಕಲಬುರಗಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ತೊಗರಿ ಬೆಳೆಗಾರರು ಸಂಕಷ್ಟದಲ್ಲಿರುವಾಗಲೇ, ರಾಜ್ಯ ಸರ್ಕಾರವು ತೊಗರಿಗೆ ನೀಡುತ್ತಿದ್ದ ಪ್ರೋತ್ಸಾಹಧನವನ್ನೂ ಕಿತ್ತುಕೊಂಡು ಅನ್ನದಾತರಿಗೆ ಅನ್ಯಾಯವೆಸಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತಿ ಕ್ವಿಂ. ತೊಗರಿಗೆ ಗರಿಷ್ಠ 550 ರೂ.ವರೆಗೆ ಪ್ರೋತ್ಸಾಹಧನನೀಡಲಾಗುತ್ತಿತ್ತು. ಇನ್ನಾದರೂ ಬಿಜೆಪಿ ಸರ್ಕಾರ ಪ್ರೋತ್ಸಾಹಧನ ನೀಡುತ್ತ ತೊಗರಿ ರೈತರ ನೆರವಿಗೆ ಓಡೋಡಿ ಬರಲಿ ಎಂದೂ ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here