ಜನರನ್ನು ಜೂಜು ಕೂಪಕ್ಕೆ ತಳ್ಳುತ್ತಿರುವ ಆನ್‌ಲೈನ್ ರಮ್ಮಿ ಜಾಹೀರಾತುಗಳು

0
1103

ಜೂಜಾಟದಿಂದ ಮಹಾಭಾರತವೇ ಆಗಿ ಹೋಗಿದೆ, ರಾಜ್ಯವಷ್ಟೆ ಅಲ್ಲ, ಹೆಂಡತಿ ಮಕ್ಕಳನ್ನು ಸಹ ಪಣಕ್ಕೆ ಹಚ್ಚಿ ಸೋತ ಉದಾಹರಣೆಗಳಿವೆ, ಅಲ್ಲದೇ ಪ್ರಸ್ತುತ ಜೂಜಾಟದಂತಹ ಕೆಟ್ಟ ಚಟಕ್ಕೆ ಮನೆ, ಮಠ ಹರಾಜಾಗಿ ಎಷ್ಟೋ ಸಂಸಾರಗಳು ಬೀದಿಗೆ ಬಂದಿವೆ.
ಎಲ್ಲಿಯಾದರೂ ಜೂಜಾಟದಲ್ಲಿ ತೊಡಗಿದ್ದ ಸುದ್ದಿ ತಿಳಿಯುತ್ತಲೇ ಪೋಲಿಸರು ದಾಳಿ ಮಾಡಿ, ಜೂಜುಕೋರರ ವಿರುದ್ಧ ಕ್ರಮ ಜರುಗಿಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ತೀನ್ ಪತ್ತಿ, ರಮ್ಮಿ, ಮಟಕಾಗಳಂತ ಮನೆಮುರುಕ ಧಂಧೆಗಳು ರಾಜಾರೋಷವಾಗಿ ನಡೆಯುತ್ತಿದ್ದು, ಇದಕ್ಕೆ ಏಕೆ ಇಲ್ಲ, ದಂಡ, ಕ್ರಮ.
ಯಾಕೆಂದರೆ ಇದರಿಂದ ಆನ್‌ಲೈನ್ ಕಂಪನಿಗಳಿಗೆ ಕಮೀಷನ್ ಸಿಗುತ್ತದೇ ಅಲ್ಲದೇ ಸರಕಾರಗಳಿಗೂ ಇದರ ಟ್ಯಾಕ್ಸ್ ಹೋಗುತ್ತಿದೆ. ಸರಕಾರಕ್ಕೆ ತೆರಿಗೆ ಸಿಕ್ಕರೆ ಸಾಕು, ಜೂಜಾ ದರೂ ಆನ್‌ಲೈನ್ ಆಡಿ, ಇದಕ್ಕೆ ಯಾವುದೇ ತಡೆಗಳಿಲ್ಲ.
ಕೊಟಿಗಟ್ಟಲೇ ಹಣ ದಿನನಿತ್ಯ ಬರೀ ಜೂಜಾಟ ನಡೆಸುತ್ತಿರುವ ಕಂಪನಿಗಳಿಗೆ ಬರುವುದಾದರೆ ಸರಕಾರಕ್ಕೆ ಎಷ್ಟು ಬರಬಹುದು ಯೋಚನೆ ಮಾಡಿ.
ಅದೀರಲಿ ಇತ್ತೀಚಿನ ದಿನಗಳಲ್ಲಿ ಮೋಬೈಲ್ ತೆಗೆದರೆ ಸಾಕು, ಗೂಗಲ್, ಫೋನ್‌ಪೇ, ಗೂಗಲ್ ಪೇಗಳಂತ ಆ್ಯಪ್‌ಗಳಲ್ಲದೇ ಸುದ್ದವಾಹಿನಿಗಳ ವೆಬ್‌ಸೈಟ್‌ಗಳಲ್ಲೂ ರಮ್ಮಿ ಆಡಿ ಹಣ ಗಳಿಸಿ, ಶೇ.10% ಬೋನಸ್ ಗ್ಯಾರಂಟಿ ಅಂತಹ ಜಾಹೀರಾತುಗಳು ರಾರಾಜೀಸುತ್ತಿವುದು ನೋಡಿದರೆ ಹಣಕ್ಕಾಗಿ ಸರಕಾರವಾಗಲೀ, ಕಂಪನಿಗಳಗಾಗಲಿ ಇಷ್ಟು ಕೀಳು ಮಟ್ಟಕ್ಕೇ ಇಳಿದಿವೆ ಎನ್ನುವುದು ಅರ್ಥವಾಗುತ್ತದೆ.
ಸರಕಾರಗಳು ಇದನ್ನು ತಡೆಗಟ್ಟಿ, ಜನಸಾಮಾನ್ಯರನ್ನು ಜೂಜಾಟದಿಂದ ದೂರುಳಿಯಲು ಇಂತಹ ಜಾಹೀರಾತುಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಹಿಳೆಯರು ಇದರ ವಿರುದ್ದ ಬಂಡೇಳುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here