ಕಲಬುರಗಿ, ಜ. 5: ಕಳೆದ 14 ವರ್ಷಗಳಿಂದ ನಿರಂತರವಾಗಿ ಕಲಬುರಗಿ ನಗರದಿಂದ ಪ್ರಕಟಗೊಳ್ಳುತ್ತಿರುವ ರಾಜು ದೇಶಮುಖ ಸಂಪಾದಕ್ವತದ ಮನೀಷ ಪತ್ರಿಕೆಯ 2021ನೇ ಹೊಸ ವರ್ಷದ ಕ್ಯಾಲಂಡರ್‌ಗಳ ಬಿಡುಗಡೆ ಸಮಾರಂಭ ಇಂದು ನಗರದ ಪತ್ರಿಕಾ ಭವನದಲ್ಲಿ ನಡೆಯಿತು.
ನೂತನ ವರ್ಷದ ಕ್ಯಾಲೆಂಡರ್‌ನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಹಾಗೂ ಸುದ್ದಿ ಸಮಯ ಟಿವಿ ಚಾನೆಲ್‌ನ ಮುಖ್ಯಸ್ಥರಾದ ಭವಾನಿಸಿಂಗ್ ಠಾಕೂರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕರ‍್ಯಕಾರಣಿ ಸದಸ್ಯರೂ ಉದಯವಾಣಿ ಪತ್ರಿಕೆಯ ಬ್ಯೂರೋ ಚೀಫ್ ಹಣಮಂತರಾವ ಭೈರಾಮಡಗಿ, ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕರ‍್ಯಕಾರಣಿ ಹಿರಿಯ ಸದಸ್ಯರಾದ ದೇವೇಂದ್ರಪ್ಪ ಕಪನೂರ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದೇವೀಂದ್ರಪ್ಪ ಅವಂಟಿ, ಸಂಘದ ಗ್ರಾಮೀಣ ಉಪಾಧ್ಯಕ್ಷರಾದ ಗುರಬಸಪ್ಪ ಸಜ್ಜನಶೆಟ್ಟಿ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ್ ಕಾಳಗಿ ಅವರುಗಳು ಸೇರಿದಂತೆ ಪತ್ರಿಕೆಯ ಸಂಪಾದಕರಾದ ರಾಜು ದೇಶಮುಖ ಅವರುಗಳು ಬಿಡುಗಡೆಗೊಳಿಸಿದರು.
ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಭವಾನಿಸಿಂಗ್ ಠಾಕೂರ ಅವರು ಪತ್ರಿಕಾ ಓದುವುದು, ಕ್ಯಾಲೆಂಡರ್ ಮಾಡುವುದು ಸುಲಭ ಆದರೆ ಒಂದು ಪತ್ರಿಕೆ ತಯಾರಿಸಲು 10 ರೂ. ವೆಚ್ಚವಾದರೆ ಅದರಿಂದ ಬರುವುದು 5 ರೂ. ಬೇರೋಂದು ವಸ್ತು 10 ರೂ.ಗೆ ಸಿಕ್ಕರೆ ಅದಕ್ಕೆ 2 ಸೇರಿಸಿ ಮಾರುವುದು ರೂಢಿಯಲ್ಲಿದೆ, ಇಂತಹ ಡಿಜಿಟಲ್ ಯುವದಲ್ಲಿ ಪತ್ರಿಕ ನಡೆಸಿಕೊಂಡು ಬರುವುದು ಬಹು ಕಷ್ಟದ ಕೆಲಸವಾಗಿದೆ ಎಂದರು.
ಇನ್ನೊರ್ವ ಅತಿಥಿ ಹಣಮಂತರಾವ ಭೈರಾಮಡಗಿ ಅವರು ಮಾತನಾಡಿ, ಮನೀಷ ಪತ್ರಿಕೆ ಕಳೆದ 14 ವರ್ಷಗಳಿಂದ ಜಿಲ್ಲೆಯಲ್ಲಿ ಪ್ರಸಾರವಾಗುತ್ತಿದ್ದು, ಇತ್ತಿಚೀನ ಕೆಲವು ತಿಂಗಳುಗಳಿAದ ವೆಬ್‌ಸೈಟ್ ಮುಖಾಂತರ ಲಕ್ಷಾಂತರ ಓದುಗರನ್ನು ಸೇಳೆದಿದ್ದು,ಇನ್ನು ಮುಂದಿನ ದಿನಗಳಲ್ಲಿ ಪತ್ರಿಕೆ ಎತ್ತರ ಶಿಖರಕ್ಕೆ ಏರುವುದರಲ್ಲಿ ಸಂದೇಶವಿಲ್ಲವೆAದು ನುಡಿದರು.
ಇದೇ ಸಂದರ್ಭದಲ್ಲಿ ಮನೀಷ ಪತ್ರಿಕೆಯ ಸಂಪಾದಕರ ಪುತ್ರರೂ ಹಾಗೂ ಮನೀಷ ಪತ್ರಿಕೆಯ ಹೆಸರಿಟ್ಟಿರುವ ಮನೀಷ ದೇಶಮುಖ ಅವರ 23ನೇ ಜನ್ಮದಿನೋತ್ಸವನ್ನು ಸಹ ಕೆಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಸಮಾರಂಭದಲ್ಲಿ ಹಿರಿಯ ನ್ಯಾಯವಾದಿ ಚಂದ್ರಕಾAತ ಕಾಳಗಿ, ರಾಕೇಶ ದೇಶಮುಖ, ವಿಜಯಕುಮಾರ ನಂದ್ಯಾಳ, ಮರೆಪ್ಪ ಕಡಿಮನಿ, ಮಲ್ಲಿಕಾರ್ಜುನ ಹತ್ತಿ, ಮಾಣಿಕ ಮುಕರಂಬಿ ಸೇರಿದಂತೆ ಇನ್ನು ಹಲವರು ಭಾಗವಹಿಸಿದ್ದರು.