ಕೊಲಕತ್ತಾ, ಜ. 02: ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿಯ ಶನಿವಾರ ಬೆಳಿಗ್ಗೆ ಹೃದಯ ಘಾತದಿಂದ ಬಳಲಿ ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಿಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದ ಗಂಗೂಲಿಯನ್ನು ಕೋಲ್ಕತ್ತಾದ ವುಡ್ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೃದಯಾಘಾತದ ನಂತರ ಆಂಜಿಯೋಪ್ಲ್ಯಾಸ್ಟಿ ಮಾಡಿದ ವೈದ್ಯರು, ಅವರಿಗೆ 2 ಸ್ಟಂಟ್‌ಗಳನ್ನು ಹಾಕಬಹುದ್ದಾಗಿದ್ದು ಇನ್ನು ಹೆಚ್ಚಿನ ಪರೀಕ್ಷೆಗಳು ನಡೆಸಿದ ನಂತರ ಗಂಗೂಲಿಯನ್ನುಬಿಡುಗಡೆ ಮಾಡಲಾಗುವುದು ಎಂದು ಬೋರಿಯಾ ಮಜುಂದಾರ್ ಖಚಿತಪಡಿಸಿದ್ದಾರೆ.
ಸೌರವ್ ಗಂಗೂಲಿ ತಮ್ಮ ಮನೆಯ ಜಿಮ್‌ನಲ್ಲಿ ಟ್ರೆಡ್ ಮಿಲ್ ಮಾಡುವಾಗ ಎದೆಯ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಅವರು ಐಹೆಚ್ಡಿ ಒಇ ಇಸ್ಕೆಮಿಕ್ ಹೃದ್ರೋಗದ ಕುಟುಂಬದ ಇತಿಹಾಸವನ್ನು ಹೊಂದಿದ್ದರು. ಮಧ್ಯಾಹ್ನ 1 ಗಂಟೆಗೆ ಆಸ್ಪತ್ರೆಗೆ ಬಂದಾಗ ಅವರ ನಾಡಿಮಿಡಿತ 70 ಆಗಿತ್ತು.
ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದ್ದು, ಅವರನ್ನು ಎಲ್ಲಾ ಪರೀಕ್ಷೆಗೆ ಒಳಪಡಿಲಾಗುತ್ತಿದೆ.
ಇಂದು ಮುಂಜಾನೆ ಎಂದನಿAತೆ ಅವರು ಜಿಮ್‌ನಲ್ಲಿದ್ದಾಗ ತಲೆತಿರುಗುವಿಕೆಗೆ ಒಳಗಾಗಿ ಕೂಡಲೇ ಅವರನ್ನು ಪರೀಕ್ಷೆಗಾಗಿ ವುಡ್‌ಲ್ಯಾಂಡ್ಸ್ಗೆ ಕರೆದೋಯ್ಯಲಾಯಿತು. ಹೃದಯ ಸಮಸ್ಯೆಯಿದೆ ಎಂದು ಬೆಳಕಿಗೆ ಬಂದಿತು.
ವೈದ್ಯರಾದ ಡಾ. ಸರೋಜ್ ಮೊಂಡಾಲ್ ಒಳಗೊಂಡAತೆ ಮೂರು ವೈದ್ಯರುಗಳು ಅವರನ್ನು ನೋಡಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಗುಣಮುಖರಾಗುವ ಭರವಸೆ ನಮಗಿದೆ ಎಂದು ಬೋರಿಯಾ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾರತೀಯ ಕ್ರಿಕೆಟ್ ಆಟಗಾರನಿಗೆ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದರು ಮತ್ತು ಅವರು ‘ಸೌಮ್ಯ ಹೃದಯ ಸ್ತಂಭನ’ದಿAದ ಬಳಲುತ್ತಿದ್ದಾರೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಸೌರವ ಗಂಗೂಲಿ ಶೀಘ್ರ ಚೇತರಿಕೆಗಾಗಿ ನಾನು ಬಯಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ನಾನು ಅವರ ಕುಟುಂಬದೊAದಿಗೆ ಮಾತನಾಡಿದ್ದೇನೆ. ದಾದಾ ಸ್ಥಿರವಾಗಿದ್ದಾರೆ ಮತ್ತು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ”ಎಂದು ಕೇಂದ್ರ ಗೃಹ ಸಚಿವ ಅಮೀತ ಶಾ ಟ್ವೀಟ್ ಮಾಡಿದ್ದಾರೆ.