ಕಲಬುರಗಿ, ಡಿ. 31: ಹೊಸ ವರ್ಷದ ಸ್ವಾಗತ ಹಾಗೂ ಆಚರಣೆಗಾಗಿ ಮಾರುಕಟ್ಟೆಯಲ್ಲಿ ಜನರು ಕೇಕ್ ಖರೀದಿಯಲ್ಲಿ ನಿರತರಾಗಿರುವ ದೃಶ್ಯ ನಗರದ ಎಲ್ಲ ಬೇಕರಿಗಳ ಮುಂದೆ ಗೋಚರಿಸುತ್ತಿತ್ತು.
ವಿವಿಧ ನಮೂನೆಯ ಕೇಕ್‌ಗಳ ಬೆಲೆ ಗಗನಕೇರಿದ್ದರೂ ಕೂಡಾ ಲೆಕ್ಕಸದ ಜನರು ಯಾವುದಕ್ಕೂ ಚೌಕಾಸಿ ಮಾಡದೇ ಹೇಳಿದಷ್ಟೂ ದುಡ್ಡು ಕೊಟ್ಟು ಖರೀದಿಸುವ ದೃಶ್ಯ ಸರ್ವೆ ಸಾಮಾನ್ಯವಾಗಿತ್ತು.
ಈಗಾಗಲೇ ಕರೊನಾದ ರೂಪಾಂತರ ಸೋಂಕು ಮತ್ತೇ ರಾಜ್ಯದಲ್ಲಿ ಬ್ರಿಟನ್ ಕರೊನಾ ಸೋಂಕು 7 ಜನರಲ್ಲಿ ವಕ್ಕರಿಸಿದ್ದರೂ ಜನರು ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ ಕೇಕ್ ಖರೀದಿ ಮಾಡುತ್ತಿದ್ದರು.