ಚಲಗೇರಾ ಪಂಚಾಯತ್‌ಗೆ ಬಿಜೆಪಿ ಬೆಂಬಲಿತ 4 ಜನರ ಆಯ್ಕೆ

0
934

ಕಲಬುರಗಿ, ಡಿ. 30: ಆಳಂದ ತಾಲೂಕಿನ ಚಲಗೇರಾ ಗ್ರಾಮ ಪಂಚಾ ಯತ್‌ನ ವಾರ್ಡ ನಂ. 4 ರಿಂದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಯೆಂದು ಹೇಳಲಾದ ಅಂಬಿಕಾ ಶಿವಾನಂದ ಮೂಲಗೆ, ಯಲ್ಲಾಬಾಯಿ ಹವಳಿಕರ, ಶಿವಲಿಂಗಪ್ಪ ಸಕ್ಕರಗಿ ಮತ್ತು ಸಿದ್ದಾರೂಢ ಹ. ಬಿರಾದಾರ ಅವರು ಜಯಗಳಿಸಿದ್ದಾರೆ.
ಚುನಾವಣಾ ಕಣದಲ್ಲಿ ಒಟ್ಟು 9 ಜನ ಅಭ್ಯರ್ಥಿಗಳಿದ್ದರು. ಇಲ್ಲಿ ನಾಲ್ಕು ಅಭ್ಯರ್ಥಿ ಗಳನ್ನು ಮಾತ್ರ ಆಯ್ಕೆ ಮಾಡಬೇಕಾಗಿತ್ತು.
ಒಟ್ಟು 1250 ಮತದಾರರನ್ನು ಹೊಂದಿದ್ದ ಈ ವಾರ್ಡನಲ್ಲಿ ಮೊದಲನೇ ಹಂತವಾಗಿ 22ರಂದು ಮತದಾನ ನಡೆದಿತ್ತು. ಒಟ್ಟು 1108 ಜನ ಮತದಾರರು ತಮ್ಮ ಮತವನ್ನು ಚಲಾಯಿಸಿದ್ದರು.

LEAVE A REPLY

Please enter your comment!
Please enter your name here