0
419

ಕಲಬುರಗಿ. ಡಿ. 30: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವ ಜನಿಕರು ಸರಳವಾಗಿ ಹಾಗೂ ಸಾಂಕೇತಿ ಕವಾಗಿ ಹೊಸ ವರ್ಷವನ್ನು ಆಚರಿಸಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಅವರು ಜನತೆಗೆ ಕರೆ ನೀಡಿದ್ದಾರೆ.
ಗ್ರಾ.ಪಂ. ಚುನಾವಣೆಯ ಮತಎಣಿಕೆ ಹಿನ್ನೆಲೆ ಬುಧವಾರ ನಗರದ ಸರ್ಕಾರಿ ಪಾಲಿಟೆಕ್ನಿಕ್ ಗೆ ಭೇಟಿ ನೀಡಿ ಮತ ಏಣಿಕೆ ಪ್ರಕ್ರಿಯೆ ಪರಿಶೀಲಿಸಿ ಬಳಿಕ ಮಾಧ್ಯಮಗ ಳೊಂದಿಗೆ ಮಾತನಾಡುತ್ತಿದ್ದರು.
ಬ್ರಿಟನ್‌ನ ರೂಪಾಂತರ ಕೊರೊನಾ ವೈರಸ್ ಇದೀಗ ದೇಶಕ್ಕೂ ಕಾಲಿಟ್ಟಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಅವರು ಸಲಹೆ ನೀಡಿದರು.
2020ರ ವರ್ಷದಲ್ಲಿ ಕೊರೋನಾ ಮತ್ತು ಪ್ರವಾಹದಿಂದ ಜಿಲ್ಲೆಯ ಜನ ಸಾಕಷ್ಟು ನೋವನ್ನು ಅನುಭವಿಸುವಂತಾಗಿತ್ತು. 2021ರ ವರ್ಷಕ್ಕೆ ಅಂತಹ ದಿನಗಳು ಬಾರದಿರಲಿ ಎಂದು ಆಶಿಸಿದರು. ಅಲ್ಲದೇ, ಕೊರೋನಾ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಸೇರಿದಂತೆ ಪ್ರತಿಯೊಬ್ಬರು ಸಹಕರಿಸಿದಕ್ಕೆ ಡಿಸಿ ಅವರು ಅಭಿನಂದಸಿದರು.

LEAVE A REPLY

Please enter your comment!
Please enter your name here