ಪತ್ರಕರ್ತರಿಗೆ ಮೊದಲನೇ ಹಂತ ಲಸಿಕೆ ನೀಡಲು ಕೋವಿಡ್-19 ವಾರಿಯರ್ಸ್ ಪರಿಗಣಿಸಬೇಕು

0
1098

ಕಲಬುರಗಿ, ಡಿ. 28: ಈ ಶತಮಾನದ ಮಾರಕ ಕೋವಿಡ್ -19 ಸೋಂಕಿಗೆ ಇದೀಗ ಲಸಿಕೆ ಸಿದ್ದವಾಗಿದ್ದು, ಜಿಲ್ಲೆಯಲ್ಲಿಯೂ ಜನವರೆ ತಿಂಗಳಲ್ಲಿ ಈ ಲಸಿಕೆಯನ್ನು ಉಚಿತವಾಗಿ ನೀಡಲು ಈಗಾಗಲೇ ಸಿದ್ದತೆ ನಡೆದಿದ್ದು, ಮೊದಲು ಕರೊನಾ ಫ್ರಂಟ್‌ಲೈನ್ ವಾರಿಯರ್ಸ್ಗಳಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲು ಸರಕಾರ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಇದೊಂದು ಒಳ್ಳೆಯ ನಿರ್ಧಾರ ಆದರೆ ಈ ಲಸಿಕೆ ವಿತರಣೆ ಹೇಗೆ? ಮಾಡುವುದು, ಯಾರು ಫ್ರಂಟ್‌ಲೈನ್ ವಾರಿಯರ್ಸ್ ಎಂದು ಗುರುತಿಸುವುದು ಇದಕ್ಕೆ ಏನು ಮಾನದಂಡ ಎಂಬ ಹಲವಾರು ಪ್ರಶ್ನೆಗಳು ಉದ್ಭವಿಸುವುದುÀ ಸಹಜ.
ಕೊರೊನಾ ವಾರಿಯರ್ಸ್ ಅಂದರೆ ವೈದ್ಯರು, ದಾದಿಯರು, ಆರೋಗ್ಯ ಸಹಾಯಕರು, ಅಂಗನವಾಡಿ ಕಾರ್ಯಕರ್ತೆಯರು, ಪೋಲಿಸರು, ಪಾಲಿಕೆಯ ಪೌರ ಕಾರ್ಮಿಕರು, ಅಲ್ಲದೇ ಮೊದಲನೇ ಹಂತದಲ್ಲಿ ಲಸಿಕೆಯನ್ನು ನೀಡಲು ಆರೋಗ್ಯ ಕಾರ್ಯಕರ್ತರನ್ನು ಹೇಗೆ ಸರಕಾರ ಗುರುತಿಸಿದೆಯೋ ಅದೇ ನಿಟ್ಟಿನಲ್ಲಿ ಪತ್ರಕರ್ತರನ್ನು ಸಹ ಗುರುತಿಸಿ ಮೊದಲನೇ ಹಂತದಲ್ಲಿ ಲಸಿಕೆ ನೀಡಬೇಕು. ಬರೀ ಪತ್ರಕರ್ತರು ಕರೊನಾ ಫ್ರಂಟ್‌ಲೈನ್ ವಾರಿಯರ್ಸ್ ಎಂದು ಬಾಯಿಂದ ಹೇಳಿದರೆ ಸಾಲದು, ಸರಕಾರ ತನ್ನ ಮಾರ್ಗಸೂಚಿಯಲ್ಲಿ ಸಹ ಪತ್ರಕರ್ತರನ್ನು ಕರೋನಾ ವಾರಿಯರ್ಸ್ ಎಂದು ಗುರುತಿಸಬೇಕು.
ಆದರೆ ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೋರೆದು, ಅಲ್ಲದೇ ಕೊರೊನಾ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗ್ರತಿ ಮೂಡಿಸುವ ಹಂಬಲದಲ್ಲಿ ಕೋವಿಡ್ ಅಂದರೆ ಏನು, ಅದು ಹೇಗೆ, ಅದರಿಂದ ಏನಾಗುತ್ತದೆ, ಜನರು ಭಯಭೀತರಾಗದೇ ಮುನ್ನಚ್ಚರಿಕೆ ಹೇಗೆ ವಹಿಸಬೇಕು ಇತ್ಯಾದಿಯಾಗಿ ಸಾರ್ವಜನಿಕರಿಗೆ ಮುಟ್ಟಿಸಿದ್ದು, ಪತ್ರಕರ್ತರು, ಅದರಲ್ಲೂ ಎಲೆಕ್ಟಾçನಿಕ್ ಮೀಡಿಯಾದ ಪಾತ್ರ ಬಹುಮುಖ್ಯವಾಗಿತ್ತು, ಆದರೆ ಪತ್ರಕತರ‍್ಯಾರೂ ಸರಕಾರಕ್ಕೆ ಕರೊನಾ ಫ್ರಂಟ್‌ಲೈನ್ ವಾರಿಯರ್ಸ್ತದಹ ಕಾಣುತ್ತಿಲ್ಲ.
ಮೊದಲು ಜಿಲ್ಲಾಡಳಿತ ವಾರಿಯರ್ಸ್ ಗುಂಪಿನಲ್ಲಿ ಫ್ರಂಟ್‌ಲೈನ್‌ನಲ್ಲಿ ಪತ್ರಕರ್ತರನ್ನು ಸೇರಿಸಿ, ಅವರಿಗೂ ಹಾಗೂ ಅವರ ಕುಟುಂಬ ವರ್ಗದವರಿಗೆ ಲಸಿಕೆ ನೀಡುವಲ್ಲಿ ಮುರ್ತುವಜಿ ವಹಿಸಬೇಕಾಗಿದೆ.

LEAVE A REPLY

Please enter your comment!
Please enter your name here