ಮೆಲ್ಬೋರ್ನ್, ಡಿ. 27: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೆಲ್ಬೋರ್ನ್ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಆಡುವ ಹನ್ನೊಂದಕ್ಕೆ ಮರಳಿದ ನಂತರ ರವೀಂದ್ರ ಜಡೇಜಾ ಪೂರ್ಣ ರೂಪದಲ್ಲಿ ಕಾಣಿಸಿಕೊಂಡರು. ಪಂದ್ಯದ ಮೊದಲ ದಿನದಂದು ಜಡೇಜಾ ತಮ್ಮ ಫೀಲ್ಡಿಂಗ್ ಮೂಲಕ ಪ್ರೇಕ್ಷಕರನ್ನು ಮತ್ತೊಮ್ಮೆ ಅಚ್ಚರಿಗೊಳಿಸಿದ್ದಾರೆ. ವಾಸ್ತವವಾಗಿ, ಜಡೇಜಾ ಆಸ್ಟ್ರೇಲಿಯಾದ ಆಟಗಾರ ಮ್ಯಾಥ್ಯೂ ವೇಡ್ ಅವರ ಅದ್ಭುತ ಕ್ಯಾಚ್ ಪಡೆದರು. ಅದರ ನಂತರ ಅವರು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರಶಂಸೆಯನ್ನು ಪಡೆಯುತ್ತಿದ್ದಾರೆ.
ಆಸಿಸ್ ವಿರುದ್ಧ ನಡೆಯುತ್ತಿರುವ ಗವಾಸ್ಕರ್ ಮತ್ತು ಬಾರ್ಡರ್ ಟ್ರೋಪಿಯ 2ನೇ ಟೆಸ್ಟ ಕ್ರಿಕೆಟ್‌ನಲ್ಲಿ ಆಸಿಸ್‌ನ ವೇಡ್ ಅವರ ಏರ್ ಶಾಟ್ ಆಡಿದ ಚೆಂಡನ್ನು ಜಡೇಜಾ ಅದ್ಭುತ ಕ್ಯಾಚ್‌ಗೆ ಟ್ವಿಟ್ಟರ್ನಲ್ಲಿ ಕ್ರಿಕೆಟ್ ಅಭಿಮಾನಿಗಳ ಪ್ರತಿಕ್ರಿಯೆಯ ಪ್ರವಾಹ ಹರಿದು ಬಂದಿದೆ.
ಟ್ವಿಟ್‌ನಲ್ಲಿ ಏನತ್ತು ಅಂತಿರಾ ಭಾರತೀಯ ಕ್ರಿಕೆಟ್ ಪ್ರೇಮಿಗಳು ಮೊದಲು ಜಡೆಜಾ ಅವರ “ಸಾಮರ್ಥ್ಯವನ್ನು ಎಂದಿಗೂ ಅನುಮಾನಿಸಬೇಡಿ …” ಎಂದು ಬರೆದ್ದಾರೆ.
ಆಸ್ಟ್ರೇಲಿಯಾದ ಇನ್ನಿಂಗ್ಸ್ನ 13 ನೇ ಓವರ್‌ನಲ್ಲಿ ವೇಡ್ ಅಶ್ವಿನ್ ಅವರ ಚೆಂಡಿನಿAದ ಏರ್ ಶಾಟ್ ಆಡಿದರು, ಅದು ಒಬ್ಬರಲ್ಲ, ಇಬ್ಬರು ಆಟಗಾರು ಕ್ಯಾಚ್ ತೆಗೆದುಕೊಳ್ಳಲು ಜಡೇಜಾ ಮತ್ತು ಶುಬ್ಮನ್ ಗಿಲ್ ಓಡಿದರು. ಈ ಸಮಯದಲ್ಲಿ, ಶುಬ್ಮನ್ ಗಿಲ್ ಮತ್ತು ಜಡೇಜಾ ಡಿಕ್ಕಿ ಹೊಡೆದರು. ಆದರೆ, ಜಡೇಜಾ ಸಮತೋಲನವನ್ನು ಕಳೆದುಕೊಳ್ಳದೆ ಕ್ಯಾಚ್ ಹಿಡಿಯುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.