ಕಲಬುರಗಿ, ಡಿ. 25: ಆಹಾರ ಪ್ರಯೋ ಗಾಲಯ ಸ್ಥಳಾಂತರವಾಗುತ್ತಿದ್ದರು ಬಾಯಿ ಮುಚ್ಚಿ ಕುಳಿತಿರುವ ಕಲ್ಯಾಣ ಕರ್ನಾಟಕ ಶಾಸಕ ಸಂಸದರು ವಿಶೇಷವಾಗಿ ಸರಕಾರದ ಭಾಗವಾಗಿರುವ ಬಿಜೆಪಿ ಜನಪ್ರತಿನಿಧಿಗಳು ಕೂಡಲೇ ರಾಜೀನಾಮೆಗೆ ನೀಡಬೇಕೆಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಅವರು ಆಗ್ರಹಿಸಿದ್ದಾರೆ.
ವಿಭಾಗಕ್ಕೆ ಒಂದರAತೆ ಇರುವ ಆಹಾರ ಪ್ರಯೋಗಾಲಯ ಬೆಳಗಾವಿಗೆ ಸ್ಥಳಾಂತರಿ ಸುತ್ತಿರುವುದು ಖಂಡನೀಯವಾಗಿದೆ. ಕಲ್ಯಾಣ ಕರ್ನಾಟಕ ನಾಮಕರಣ ಮಾಡಿದರೆ ಸಾಲದು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೆಚ್ಚಿನ ಕಚೇರಿಗಳನ್ನು ತರುವ ಕೆಲಸ ಮಾಡುವುದು ಬಿಟ್ಟು ಇದ್ದ ಕಚೇರಿಗಳನ್ನು ಸ್ಥಳಾಂತರಿಸುವುದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ವಿರೋಧಿ ಸರ್ಕಾರ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದ ಅವರು ಜರಿದಿದ್ದಾರೆ.
ಆಹಾರ ಪ್ರಯೋಗಾಲಯ ಇರುವ ಸ್ಥಳದಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಪ್ರಾರಂಭಿಸುವ ನೆಪದಲ್ಲಿ ಸ್ಥಳಾಂತರದ ಕುತಂತ್ರ ನಡೆಯುತ್ತಿದೆ. ಕಲಬುರಗಿಯಲ್ಲಿ ಆಹಾರ ಪ್ರಯೋಗಾಲಯ ಸ್ಥಾಪಿಸಲು ಜಾಗ ಸಿಗುವುದಿಲ್ಲ ಎನ್ನುವುದು ನಾಚಿಕೆಗೇಡಿನ ವಿಷಯ ಕೂಡಲೇ ಪ್ರಯೋಗಾಲಯವನ್ನು ಕಲಬುರ್ಗಿಯಲ್ಲಿ ಮುಂದುವರಿಸಬೇಕು ಎಂದು ಎಲ್ಲ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹೇರಿ ಪ್ರಯೋಗಾಲಯ ಕಲ್ಬುರ್ಗಿಯಲ್ಲಿ ಉಳಿದುಕೊಳ್ಳುವಂತೆ ಮಾಡಬೇಕು ಅದಾಗದಿದ್ದರೆ ಕೂಡಲೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಖಡಾಖಂಡಿತವಾಗಿ ಅವರು ಹೇಳಿದ್ದಾರೆ.
ನಾವು ಹೋರಾಟ ಮಾಡಿ ಸರಕಾರಕ್ಕೆ ಕಲ್ಯಾಣ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಮುಂದುವರಿಸಿದರೆ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡಿ ಎಂದು ಆಗ್ರಹಿಸುತ್ತೇವೆ ಇದೇ ರೀತಿ ಅನ್ಯಾಯ ಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕದ ಹಳ್ಳಿ ಹಳ್ಳಿಯಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಸರಕಾರ ಕೇಳಬೇಕಾಗುತ್ತದೆ ತೆಲಂಗಾಣ ಮಾದರಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದಾರೆ.