ಕೋಲಾರ, ಡಿ 23- ಬ್ರಿಟನ್ ನಲ್ಲಿ ಕೊರೊನಾ ಎರಡನೇ ಅಲೆ ರೂಪಾಂತರ ಗೊಂಡಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಹೇಳಲಾಗಿದ್ದು, ರಾತ್ರಿ ಹತ್ತರ ನಂತರ ಮದ್ಯದಂಗಡಿ ತೆರೆದರೆ ಪರವಾನಗಿ ರದ್ದುಪಡಿಸಲಾಗುವುದು ಎಂದು ಅಬಕಾರಿ ಸಚಿವ ನಾಗೇಶ್ ಎಚ್ವರಿಕೆ ನೀಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು, ರಾತ್ರಿ ಕರ್ಫ್ಯೂ
ಜಾರಿಯಲ್ಲಿ ಅಬಕಾರಿ ಇಲಾಖೆ ಪಾತ್ರ ನಿರ್ಣಾಯಕವಾಗಿರುತ್ತದೆ. ಇಲಾಖೆಯು ಮದ್ಯವಹಿವಾಟಿನ ನಿಯಮಗಳನ್ನು ಸಡಿಲ ಗೊಳಿಸಿದರೆ ಕೊರೊನಾ ಸೋಂಕು ಹೆಚ್ಚಳ ವಾಗುವ ಅತಂಕ ಎದುರಾಗಬಹುದು ಎಂದು ಹೇಳಿದರು.
ರಾತ್ರಿ ಕರ್ಫ್ಯೂ ಕುರಿತಂತೆ ಇಲಾಖೆಯ ಆಯುಕ್ತರು ಹಾಗೂ ಜಿಲ್ಲೆಗಳ ಉಪ ಆಯುಕ್ತರಿಗೆ ಮಾಹಿತಿ ರವಾನಿಸಲಾಗಿದೆ. ರಾತ್ರಿ ಹತ್ತು ಗಂಟೆಯ ನಂತರ ಮದ್ಯ ದಂಗಡಿ ಬಂದ್ ಮಾಡುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದೇವೆ ಎಂದರು.
ಕೋವಿಡ್ 19- ನಿಯಮ ಪಾಲನೆ ಸಂಬAಧ ಇ-ಮೇಲ್ ಮೂಲಕ ಮದ್ಯದಂ ಗಡಿ ಮಾಲೀಕರಿಗೂ ಸಂದೇಶ ರವಾನಿಸ ಲಾಗಿದೆ. ಎಲ್ಲ ರೀತಿಯ ಮದ್ಯದಂಗಡಿ ಗಳನ್ನು ರಾತ್ರಿ ಹತ್ತು ಗಂಟೆಯ ಮುಚ್ಚಬೇಕು ಎಂದು ಎಚ್ವರಿಕೆ ನೀಡಿದರು.