ಕಲಬುರಗಿ, ಡಿ. ೨೨: ಮೊದಲನೇ ಹಂತವಾಗಿ ಇಂದು ಕುಸನೂರ ಗ್ರಾಮ ಪಂಚಾಯತನ ವಾರ್ಡ ನಂ. ೭ಕ್ಕೆ ವಿಶ್ವವಿದ್ಯಾಲಯ ಗೇಟ್ ಎದುರುಗಡೆ, ಸಿದ್ದೇಶ್ವರ ಕಾಲೋನಿಯಲ್ಲಿ ಬರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯೊಂದರಲ್ಲಿ ೬೫ ವರ್ಷದ ಅಂಗವಿಕಲೆ ಮಹಿಳೆಯೊಬ್ಬಳು ಯಾರದೇ ಸಹಾಯವಿಲ್ಲ ನೆಲಸವರುತ್ತಲೇ ಮತದಾನ ಮಾಡಿದ ಘಟನೆ ವರದಿಯಾಗಿದೆ.
ವೃದ್ಧೆಯ ಹೆಸರು ಸಂಗಮ್ಮ ಗಂಡ ಬಂಡಪ್ಪ ಸಿದ್ದೇಶ್ವರ ಕಾಲೋನಿ ನಿವಾಸಿಯಾಗಿದ್ದು, ಎರಡು ಕಾಲುಗಳಿದ್ದರೂ ಕಾರಣಾಂತರಗಳಿAದ ನಡೆಯಲು ಸಾಧ್ಯವಿಲ್ಲದ ಈ ವೃದ್ಧೆ ಮತದಾನ ಮಾಡಿ, ಮತದಾನ ನಮ್ಮೆಲ್ಲರ ಹಕ್ಕು ಎಂಬುದು ಸಾಬೀತುಪಡಿಸಿದ್ದಾರೆ.
ಮತದಾನ ಮಾಡಲು ಬಂದ ಅಂಗವಿಕಲ ವೃದ್ದೆಯನ್ನು ಕಂಡ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು ತಾವು ಸಹಾಯ ಮಾಡುವುದಾಗಿ ಬಂದಾಗ ಅಜ್ಜಿ ಅದನ್ನು ನಿರಾಕರಿಸಿ, ಸ್ವತಃ ತಾವೇ ಕೈಲಾಗದಿದ್ದರೂ ಕುಂಡಿ ಸವರತ್ತು ಮತಗಟ್ಟೆಯೊಳಗೆ ಹೋಗಿ ಮತದಾನ ಮಾಡಿದ್ದು ಶ್ಲಾಘನೀಯವಾಗಿದೆ.
ಮತಗಟ್ಟೆಗೆ ಬಂದ ಅಜ್ಜಿಯನ್ನು ನಮ್ಮ ಪ್ರತಿನಿಧಿ ಸಂದರ್ಶಿಸಿದಾಗ, ಅಜ್ಜಿ ನೀವು ಯಾರಿಗಾದರೂ ಮತ ಹಾಕಿ, ಸಹಾಯ ಪಡೆಯುತ್ತಿರಾ ಎಂದಾಗ, ಯಾರ ಸಹಾಯವು ನನಗೆ ಬೇಡ ನನಗೆ ಯಾರು ಚೆನ್ನಾಗಿ ನೋಡಿಕೊಳ್ಳುತ್ತಾರೋ ಅಲ್ಲದೇ ಬಡಾವಣೆಗಾಗಿ ಶ್ರಮಿಸುವ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದರಲ್ಲದೇ ಕಾಲಿಲ್ಲದಿದ್ದರೂ ನೆಲ ಸವರಿಕೊಂಡು ಹೋಗಿಯಾದರೂ ಮತದಾನ ಮಾಡುವುದಾಗಿ ಹೇಳಿದರು.