ಚಿಹ್ನೆ ಬದಲಾವಣೆ; ಕಿಣ್ಣಿ ಸಡಕ ಕ್ಷೇತ್ರಕ್ಕೆ ಡಿಸೆಂಬರ್ 24ರಂದು ಮರುಮತದಾನ

0
1040

ಕಲಬುರಗಿ, ಡಿ. 22: ಇಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮತಪತ್ರದಲ್ಲಿ ಚಿನ್ಹೆ ಬದಲಾವಣೆಗೊಂಡ ಹಿನ್ನೆಲೆಯಲ್ಲಿ ಒಂದು ಗ್ರಾಮ ಪಂಚಾಯತಿ ಸ್ಥಾನಕ್ಕೆ 24ರಂದು ಮರು ಮತದಾನ ನಡೆಯಲಿದೆ.
ಜಿಲ್ಲೆಯ ಕಮಲಾಪುರ ತಾಲೂಕಿನ ಕಿಣ್ಣಿಸಡಕ ಗ್ರಾಮ ಪಂಚಾಯತಿಯ 01-ಕಿಣ್ಣಿ ಸಡಕ ಕ್ಷೇತ್ರದ ವಾರ್ಡ ನಂ. 7ಕ್ಕೆ ಮರುಮತದಾನ ನಡೆಸಲು ರಾಜ್ಯ ಚುನಾವಣಾ ಆಯೋಗವು ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ.
ಈ ಒಂದು ಕ್ಷೇತ್ರಕ್ಕೆ 24.12.2020ರಂದು ಮರು ಮತದಾನ ನಡೆಯುವ ಸಾಧ್ಯತೆಯಿದೆ. ಮರು ಮತದಾನ ನಡೆಯುವ ಈ ಕ್ಷೇತ್ರ ಅನುಸೂಚಿತ ಜಾತಿ ಮೀಸಲಾತಿ ಕ್ಷೇತ್ರವಾಗಿದೆ.
ಕಿಣ್ಣಿ ಸಡಕ ಕ್ಷೇತ್ರದ ಅಭ್ಯಥಿಯೊಬ್ಬರಿಗೆ ತುತ್ತೂರಿ ಚಿನ್ಹೆ ನೀಡಲಾಗಿದ್ದು, ಆದರೆ ಮತ ಪತ್ರದಲ್ಲಿ ತಪ್ಪಾಗಿ ಕಹಳೆ ಉದುತ್ತಿರುವ ಮನುಷ್ಯನ ಚಿನ್ಹೆ ಮುದ್ರಣವಾಗಿದೆ.
ಇದರಿಂಗಾಗಿ ಇಂದು ಮತದಾನ ನಡೆಯುತ್ತಿದ್ದ ಸಮಯದಲ್ಲಿ ಕಣದಲ್ಲಿದ್ದ ಅಭ್ಯರ್ಥಿ ಈ ಬಗ್ಗೆ ಚುನಾವಣಾಧಿಕಾರಿಗಳ ಬಳಿ ದೂರು ನೀಡಿದಾಗ, ಕೂಡಲೇ ಮತದಾನ ಸ್ಥಗಿತ ಗೊಳಿಸಲಾಗಿತ್ತು.

LEAVE A REPLY

Please enter your comment!
Please enter your name here