ಮೊದಲನೇ ಹಂತದಲ್ಲಿ 5886 ಅಭ್ಯರ್ಥಿಗಳು ಕಣದಲ್ಲಿ

0
973

ಕಲಬುರಗಿ, ಡಿ. 21: ನಾಳೆ 22ರಂದು ನಡೆಯಲಿರುವ ಜಿಲ್ಲೆಯ 7 ತಾಲೂಕುಗಳ 126 ಗ್ರಾಮ ಪಂಚಾಯತ್‌ನ ಒಟ್ಟು 2079 ಸದಸ್ಯ ಸ್ಥಾನಗಳಿಗಾಗಿ 5886 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಲಬುರಗಿ ತಾಲೂಕಿನ 28 ಗ್ರಾಮ ಪಂಚಾಯತ್‌ನ 523 ಸ್ಥಾನಗಳ ಪೈಕಿ ಈಗಾಗಲೇ 25 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಅಂತಿಮವಾಗಿ ಕಣದಲ್ಲಿ 1519 ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.
ಆಳಂದ ತಾಲೂಕಿನ 36 ಗ್ರಾಮ ಪಂಚಾಯತನ 600 ಸ್ಥಾನಗಳ ಪೈಕಿ 40 ಸದಸ್ಯರು ಅವಿರೋಧ ಆಯ್ಕೆಯಾಗಿದ್ದು, ಕಣದಲ್ಲಿ 560 ಸ್ಥಾನಗಳಿಗಾಗಿ 1462 ಅಭ್ಯರ್ಥಿಗಳು ತಮ್ಮ ಭವಿಷ್ಯವನ್ನು ಒರೆಗೆಹಚ್ಚಿದ್ದಾರೆ.
ಅಫಜಲಪೂರ ತಾಲೂಕಿನ 28 ಗ್ರಾಮ ಪಂಚಾಯತನ 498 ಸ್ಥಾನಗಳಲ್ಲಿ 37 ಜನರು ಅವಿರೋಧವಾಗಿ ಆಯ್ಕೆಯಾಗಿದ್ದು, 461 ಸ್ಥಾನಗಳಿಗಾಗಿ 1244 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿದ್ದಾರೆ.
ಕಮಲಾಪೂರದ 14 ಪಂಚಾಯತನ 270 ಸ್ಥಾನಗಳ ಪೈಕಿ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, 259 ಸ್ಥಾನಗಳಿಗಾಗಿ ಒಟ್ಟು 820 ಅಭ್ಯರ್ಥಿಗಳು ಸ್ಪರ್ಧಾಳುಗಳಾಗಿದ್ದಾರೆ.
ಕಾಳಗಿಯ 14 ಪಂಚಾಯತ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ 17 ಜನರು ಅವಿರೋಧವಾಗಿ ಆಯ್ಕೆಯಾಗಿದ್ದು, 222 ಸ್ಥಾನಗಳಿಗಾಗಿ 594 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇನ್ನು ಶಹಾಬಾದನ 4 ಗ್ರಾಮ ಪಂಚಾಯತಗಳಿಗಾಗಿ ಒಟ್ಟು 90 ಸ್ಥಾನಗಳಲ್ಲಿ 11 ಜನರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 79 ಸ್ಥಾನಗಳಿಗಾಗಿ 237 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಮೊದಲೇ ಹಂತದಲ್ಲಿ ನಡೆಯಲಿರುವ ಚುನಾವಣೆಯಲ್ಲಿ 2079 ಸದಸ್ಯ ಸ್ಥಾನಗಳಿಗಾಗಿ ಒಟ್ಟು 5886 ಅಭ್ಯರ್ಥಿಗಳು ಕಣದಲ್ಲಿದ್ದರೆ, ಎರಡನೇ ಹಂತದ ಚುನಾವಣೆಯಲ್ಲಿ 4314 ಅಭ್ಯರ್ಥಿಗಳು 1719 ಸ್ಥಾನಗಳಿಗಾಗಿ ಸ್ಪರ್ಧಿಸಲಿದ್ದಾರೆ. ಒಟ್ಟು ಜಿಲ್ಲೆಯ 3790 ಸ್ಥಾನಗಳಿಗಾಗಿ ಒಟ್ಟು 10190 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಒಟ್ಟು ಮೊದಲನೇ ಹಂತದಲ್ಲಿ 141 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರೆ ಎರಡನೇ ಹಂತದಲ್ಲಿ 242 ಅಭ್ಯರ್ಥಿಗಳು ಆಯ್ಕೆಯಾಗುವುದರೊಂದಿಗೆ ಒಟ್ಟು ಎರಡು ಹಂತ ಸೇರಿ 383 ಅಭ್ಯರ್ಥಿಗಳು ಅವಿರೋಧವಾಗಿ ಪಂಚಾಯತಗೆ ಪ್ರವೇಶಿಸಿದ್ದಾರೆ.

LEAVE A REPLY

Please enter your comment!
Please enter your name here