ಕಲಬುರಗಿ, ಡಿ. 13; ಕರೋನಾದಂತಹ ಮಹಾಮಾರಿಯಿಂದ ತತ್ತರಿಸಿದ ಜನತೆ ಮತ್ತೇ ಪುರಾತನ ಕಾಲದ ಹೋಮಿಯೋಪತಿ ಚಿಕಿತ್ಸೆಯತ್ತ ವಾಲುತ್ತಿದ್ದಾರೆ ಎಂದು ಅಬ್ಬೇ ತುಮಕೂರ ಸಿದ್ಧ ಸಂಸ್ಥಾನದ ಪೂಜ್ಯಶ್ರೀ ಡಾ. ಗಂಗಾಧರ ಮಹಾಸ್ವಾಮಿಗಳು ಹೇಳಿದ್ದಾರೆ.
ಅವರಿಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿಯ ಡಾ. ಎ. ಬಿ. ಮಾಲಕರೆಡ್ಡಿ ಹೋಮಿಯೋಪತಿ ಆಸ್ಪತ್ರೆಯ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮೇಲಿನಂತೆ ಮಾತನಾಡುತ್ತಿದ್ದರು.
ಅವರು ಮುಂದುವರೆದು, ಮಾಜಿ ಸಚಿವರೂ ಹಾಗೂ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಎ. ಬಿ. ಮಾಲಕರೆಡ್ಡಿ ಅವರ 85ನೇ ಜನ್ಮದಿನದ ಅಂಗವಾಗಿ ಆಯೋಜಿಸಿರುವ ಈ ಕಾರ್ಯಕ್ರಮ ಅತ್ಯಂತ ಸ್ತೂತ್ಯಾರ್ಹವಾಗಿದ್ದು, ಬಡವರ, ದೀನದಲಿತರಿಗೆ ಉತ್ತಮ ವೈದ್ಯಕೀಯ ಸೇವೆ ನೀಡಬೇಕೆಂದು ಶ್ರೀಗಳು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಡಾ. ಮಾಲಕರೆಡ್ಡಿ ಅವರು ಮಾತನಾಡುತ್ತ, ಗಾಂಧೀಜಿಯವರ ನವಭಾರತ ನಿರ್ಮಾಣ ಕನಸು ಹೊತ್ತು ಸಂಸ್ಥೆಯ ಅಧ್ಯಕ್ಷರಾಗಿ ಹಾಗೂ ವೈದ್ಯಕೀಯ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿರುವ ಪ್ರಾಮಾಣಿಕ ತೃಪ್ತಿ ನನ್ನದಾಗಿದೆ ಎಂದು ಹೇಳಿದರು.
ಹೈ.ಕ. ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಅವರು ಅಧ್ಯಕ್ಷೀಯ ಭಾಷಣ ಮಾಡುತ್ತ, ಹತ್ತು ಕೋಟಿ ವೆಚ್ಚದಲ್ಲಿ 19 ತಿಂಗಳಲ್ಲಿ ಕಟ್ಟಡವನ್ನು ಪೂರ್ಣಗೊಳಿಸಿ, ಸಾರ್ವಜನಿಕ ಸೇವೆಗೆ ಅರ್ಪಣೆ ಮಾಡಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಂಸತ್ ಸದಸ್ಯ ಡಾ. ಉಮೇಶ ಜಾಧವ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರುಗಳು ಮಾತನಾಡಿದರು.
ವೇದಿಕೆಯ ಮೇಲೆ ತೇಲಂಗಾಣ ಶಾಸಕ ಡಾ. ಲಕ್ಷಾö್ಮರೆಡ್ಡಿ, ವಿಧಾನ ಪರಿಷತ್ ಸದಸ್ಯ ಬಿ. ಜಿ. ಪಾಟೀಲ್, ಸಂಸ್ಥೆಯ ಉಪಾಧ್ಯಕ್ಷ ಡಾ. ಶಿವಾನಂದ ದೇವರಮನಿ, ಸದಸ್ಯರಾದ ವಿಜಯಕುಮಾರ ದೇಶಮುಖ, ಡಾ. ಬಸವರಾಜ ಪಾಟೀಲ ಅಷ್ಟೂರ, ಡಾ. ಕಾಮರೆಡ್ಡಿ, ಅರುಣಕುಮಾರ ಪಾಟೀಲ, ಡಾ. ಅರುಣಕುಮಾರ ಲೋಯಾ, ಸತೀಶ ಹಡಗಿಲ್‌ಮಠ, ಡಾ. ನಾಗೇಂದ್ರ ಮಂಠಾಳೆ, ಡಾ. ನಿತೀನ ಜವಳಿ ಮತ್ತಿತರರು ಉಪಸ್ಥಿತರಿದ್ದರು.