ಕಲಬುರಗಿ.ಡಿ.9: ಕಳೆದ ಮೂರು ದಿನಗಳ ಹಿಂದೆ ಯುವಕನೋರ್ವ ಕುರಿಕೋಟಾ ಸೇತುವೆಯ ಬಳಿ ನೀರಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ನಗರದ ರೇವಣಸಿದ್ದೇಶ್ವರ್ ಕಾಲೋನಿಯ ನಿವಾಸಿ ಮಂಜುನಾಥ್ ತಂದೆ ರಂಗರಾವ್ ಕಾಂಬಳೆ (24) ಎಂದು ಗುರುತಿಸಲಾಗಿದೆ.
ಮಂಜುನಾಥನು ರಿಲೈನ್ಸ್ ನೆಟ್ವರ್ಕಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ 8 ತಿಂಗಳಿAದ ಕೆಲಸಕ್ಕೆ ಹೋಗಿರಲಿಲ್ಲ. ಕಳೆದ ಡಿಸೆಂಬರ್ 6ರಂದು ಮತ್ತೆ ಕೆಲಸಕ್ಕೆ ಹೋಗಿದ್ದು, ಅಲ್ಲಿಂದ ನೇರವಾಗಿ ಕುರಿಕೋಟಾ ಸೇತುವೆಯ ಬಳಿ ಹೋಗಿ ತನ್ನ ಅಕ್ಕನಿಗೆ ಮೊಬೈಲ್ ಕರೆ ಮಾಡಿ ತಾನು ಇನ್ನು ಮುಂದೆ ಮರಳುವುದಿಲ್ಲ. ಸೇತುವೆಯ ಬೆಣ್ಣೆತೊರಾ ನದಿಯಲ್ಲಿ ಜಿಗಿಯುತ್ತಿದ್ದೇನೆ ಎಂದು ಹೇಳಿ ನೀರಿಗೆ ಧುಮುಕಿದ ಎನ್ನಲಾಗಿದೆ.
ತಕ್ಷಣವೇ ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿದರು ಹಾಗೂ ಮಾಹಿತಿ ಸಿಕ್ಕ ಪೋಲಿಸರೂ ಸಹ ಸ್ಥಳಕ್ಕೆ ಧಾವಿಸಿದರು. ಮಂಜುನಾಥನ ಪತ್ತೆಗಾಗಿ ನೀರಿನಲ್ಲಿ ಶೋಧ ಕೈಗೊಂಡರೂ ಸಹ ಮೂರು ದಿನಗಳಿಂದ ಪತ್ತೆಯಾಗಲಿಲ್ಲ.
ಬುಧವಾರ ಬೆಳಿಗ್ಗೆ 8-30ರ ಸುಮಾರಿಗೆ 100 ಮೀಟರ್ ದೂರದಲ್ಲಿ ಮಂಜುನಾಥನ ಮೃತದೇಹ ಪತ್ತೆಯಾಗಿದ್ದು, ಮೀನುಗಳು ತಿಂದಿದ್ದಲ್ಲದೇ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯಿತು.
ಈ
ಮಂಜುನಾಥನು ಅನಾರೋಗ್ಯಕ್ಕೆ ಒಳಗಾಗಿದ್ದಲ್ಲದೇ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ. ಈ ಕುರಿತು ಮಹಾಗಾಂವ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಕುರಿತು ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.