ಜೇವರ್ಗಿಡಿ. 8: ತಾಲೂಕಿನಲ್ಲಿ ಹತ್ತಿ ಉತ್ಪನ್ನವನ್ನು ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಲು ಈ ಬಾರಿ ಸಿದ್ದಾರ್ಥ ಫೈಬರ್ಸ್, ಮಂಜೀತ ಕಾಟನ್ ಮಿಲ್ ಮತ್ತು ಶ್ರೀ ಇಂಡಸ್ಟ್ರೀಸ್ ಜಿನ್ನಿಂಗ್ ಕಾರ್ಖಾನೆಗಳನ್ನು ಖರೀದಿ ಕೇಂದ್ರಗಳನ್ನಾಗಿ ಘೋಷಿಸಲಾಗಿದೆ. ಇದರನ್ವಯ ಭಾರತೀಯ ಹತ್ತಿ ನಿಗಮದ ವತಿಯಿಂದ ಡಿ. 4 ರ ಅಂತ್ಯಕ್ಕೆ 206 ರೈತರಿಂದ 8, 212 ಕ್ವಿಂಟಾಲ್ ಹತ್ತಿ ಖರೀದಿಸಲಾಗಿದೆ, ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ ಹೇಳಿದ್ದಾರೆ.
ವಿಧಾನ ಸಭೆಯಲ್ಲಿ ಜೇವರ್ಗಿ ಶಾಸಕ ಹಾಗೂ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ಂಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಅವರ ಪ್ರಶ್ನೆಗೆ ಲಿಕಿತವಾಗಿ ಉತ್ತರಿಸಿರುವ ಸಚಿವರು ಖರೀದಿ ಕೇಂದ್ರದಲ್ಲಿನ ತೂಕದ ಯಂತ್ರಗಳು ಅಧಿಕೃತ ತೂಕದ ಯಂತ್ರಗಳಾಗಿವೆ. ಮೇಲ್ವಿಚಾರಣೆಯನ್ನು ಭಾರತೀಯ ಹತ್ತಿ ನಿಗಮ ನಿರ್ವಹಿಸುತ್ತದೆ. ಜಿನ್ನಿಂಗ್ ಕಾರ್ಖಾನೆ ಮಾಲೀಕರು, ಎಪಿಎಂಸಿ ಸಿಬ್ಬಂದಿ ಸಹ ಉಸ್ತುವಾರಿ ನೋಡುತ್ತಾರೆ. ರೈತರಿಗೆ ಈ ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಮೋಸವಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಜೇವರ್ಗಿಯಲ್ಲಿ ಹೋಬಳಿಗೊಂದರAತೆ ಖರೀದಿ ಕೇಂದ್ರ ಆರಂಭಿಸಬೇಕು, ದಲ್ಲಾಳಿಗಳಿಂದ ಆಗುತ್ತಿರುವ ಮೋಸ ತಪ್ಪಿಸಬೇಕೆಂದು ಡಾ. ಜಯ್ ಸಿಂಗ್ ಸದನದಲ್ಲಿ ಸಚಿವರನ್ನು ಆಗ್ರಹಿಸಿದ್ದರು.
ರಾಜ್ಯದಲ್ಲಿ 2021 ರಲ್ಲಿ 6. 63 ಲಕ್ಷ ಹೆ ಹತ್ತಿ ಪ್ರದೇಶವಿದೆ. 16. 04 ಲಕ್ಷ ಬೇಲ್ ಉತ್ಪಾದನೆ ನಿರೀಕ್ಷಿಸಲಾಗಿದೆ. ರಾಜ್ಯಾದ್ಯಂತ ಭಾರತೀಯ ಹತ್ತಿ ನಿಗಮ ಗುರುತಿಸಿರುವ 48 ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಕಾರ್ಖಾನೆಗಳನ್ನು ಹತ್ತಿ ಖರೀದಿ ಕೇಂದ್ರಗಳನ್ನಾಗಿ ಘೋಷಣೆ ಮಾಡಲಾಗಿದೆ.
ಎಲ್‌ಎಕ್ಯೂ ಗುಣಮಟ್ಟದ ಹತ್ತಿ ಪ್ರತಿ ಕ್ವಿಂಟಾಲಿಗೆ 5, 515 ರು ಹತ್ತಿ (ಲಾಂಗ್ ಸ್ಪೇಷಲ್) ರು 5, 825 ರು ಗಳಂತೆ ಬೆಂಬಲ ಬೆಲೆ ನೀಡಿ ಖರೀದಿಸಲಾಗುತ್ತಿದೆ. ಹತ್ತಿ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ಈಗಾಗಲೇ 17 ಖರೀದಿ ಕೇಂದ್ರ ತೆರೆಯಲಾಗಿದೆ. ಡಿ. 4 ರ ಅಂತ್ಯಕ್ಕೆ 89, 558 ಕ್ವಿಂಟಾಲ್ ಹತ್ತಿ ಖರೀದಿಸಲಾಗಿದೆ, ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದೂ ಸಚಿವ ಸೋಮಶೇಖರ ಅವರು ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರ ಪ್ರಶ್ನೆಗೆ ವಿವರವಾದಂತಹ ಉತ್ತರ ನೀಡಿದ್ದಾರೆ.
Home Uncategorized ಜೇವರ್ಗಿ ಖರೀದಿ ಕೇಂದ್ರದಿAದ 8, 212 ಕ್ವಿಂಟಾಲ್ ಹತ್ತಿ ಖರೀದಿ ಸದನದಲ್ಲಿ ಶಾಸಕ ಅಜಯ್ ಸಿಂಗ್...