ಕಲಬುರಗಿ, ಡಿ. 8: ಇದೇ ತಿಂಗಳು 22ರಂದು ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿ ಇಂದು ಮಂಗಳವಾರ 209 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಮೊದಲನೇ ಹಂತವಾಗಿ 22ರಂದು ಒಟ್ಟು ಕಲಬುರಗಿ ಜಿಲ್ಲೆಯ 126 ಗ್ರಾಮ ಪಂಚಾಯತ್‌ಗಳ 2220 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕಲಬುರಗಿ ತಾಲೂಕಿನ 28 ಗ್ರಾಮ ಪಂಚಾಯತ್‌ಗಳ 523 ಸ್ಥಾನಗಳ ಪೈಕಿ ಇಂದು 48 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದು ಇನ್ನು 480 ಸ್ಥಾನಗಳು ಖಾಲಿ ಉಳಿದಿವೆ.
ಆಳಂದ ತಾಲೂಕಿನ 36 ಗ್ರಾಮ ಪಂಚಾಯತ್‌ಗಳ ಒಟ್ಟು 600 ಸ್ಥಾನಗಳ ಪೈಕಿ 51 ಸ್ಥಾನಗಳಿಗೆ ಅಭ್ಯರ್ಥಿಗಳು ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.
ಅಫಜಲಪೂರ ತಾಲೂಕಿನಲ್ಲಿ ಒಟ್ಟು 30 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಇಲ್ಲಿ ಒಟ್ಟು 28 ಪಂಚಾಯತಗಳ 498 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸದೇ ಇನ್ನು 468 ಸ್ಥಾನಗಳು ಖಾಲಿ ಉಳಿದಿವೆ.
ಕಮಲಾಪೂರ ತಾಲೂಕಿನಲ್ಲಿ 53 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇಲ್ಲಿ ಒಟ್ಟು 14 ಪಂಚಾಯತ್‌ಗಳಿಗಾಗಿ 239 ಸ್ಥಾನನಗಳಿವೆ.
ಕಾಳಗಿ 16, ಶಹಾಬಾದ 11 ಅಭ್ಯರ್ಥಿಗಳು ತಮ್ಮ ತಮ್ಮ ನಾಮಪತ್ರಗಳನ್ನು ಸಲ್ಲಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿಗಳು ಹಾಗೂ ಅಪರರ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.